Wednesday, September 16, 2026

BDA Apartments

ಅಧಿವೇಶನ ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ-ಕಂದಾಯ ಸಚಿವ ಆರ್.ಅ...
Home Front Page ಅಧಿವೇಶನ ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ-ಕಂದಾಯ ಸಚಿವ ಆರ್.ಅಶೋಕ್.

ಅಧಿವೇಶನ ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ-ಕಂದಾಯ ಸಚಿವ ಆರ್.ಅಶೋಕ್.

ಬೆಂಗಳೂರು,ಡಿಸೆಂಬರ್,10,2021(www.justkannada.in): ಅಧಿವೇಶನ ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಅಧಿವೇಶನ ನಿಗದಿಯಂತೆ ಎರಡು ವಾರಗಳ ಕಾಲ ನಡೆಯುತ್ತದೆ. ಅಧಿವೇಶನ ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ.  ಎಲ್ಲರಿಗೂ  2 ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ ಎಂದರು.

ನೆರೆಹಾನಿ ಪರಿಹಾರವಾಗಿ ಕಾಂಗ್ರೆಸ್ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್,  ಕಾಂಗ್ರೆಸ್ ವಿಪಕ್ಷದಲ್ಲಿದೆ ಹೀಗಾಗಿ ಪ್ರತಿಭಟನೆ ನಡೆಸುತ್ತದೆ. ಕರ್ನಾಟಕದ ಇತಿಹಾಸದಲ್ಲಿ 600 ಕೋಟಿ ಬೆಳೆ ಪರಿಹಾರ ನೀಡಿದ್ದೇವೆ.   ಕೇವಲ 20 ದಿನಗಲ್ಲಿ 500 ಕೋಟಿ ಕೊಟ್ಟಿದ್ದೇವೆ. ರೈತರ ಖಾತೆಗೆ ಹಾಕಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.

Key words: no question – curtailing – session – week.