ಅಂಬೇಡ್ಕರ್ ಪ್ರತಿಮೆ ಪುನರ್ ಸ್ಥಾಪಿಸದಿದ್ದರೇ ಉಗ್ರ ಪ್ರತಿಭಟನೆ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಎಚ್ಚರಿಕೆ.

ಮೈಸೂರು,ಡಿಸೆಂಬರ್,4,2021(www.justkannada.in):  ನಗರದ ಪಡುವಾರಹಳ್ಳಿಯ ಮಾತೃ ಮಂಡಳಿ ವೃತ್ತದಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸುತ್ತೇವೆ. ಅಂಬೇಡ್ಕರ್ ಪ್ರತಿಮೆ ಪುನರ್ ಸ್ಥಾಪಿಸದಿದ್ದರೇ ಉಗ್ರ ಪ್ರತಿಭಟನೆ ಮಾಡುವುದಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಅಂಬೇಡ್ಕರ್ ಪ್ರತಿಮೆ ತೆರವು ಈ ಬೆಳವಣಿಗೆ ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸರ್ಕಾರದ ಅಧಿಕಾರಿಗಳು ಬಲವಂತವಾಗಿ ಅಂಬೇಡ್ಕರ್ ಪ್ರತಿಮೆಯನ್ನು ತೆರವು ಮಾಡಿರುವುದು ಸರಿಯಲ್ಲ‌. ಪ್ರತಿಮೆಯನ್ನು ಪುನರ್ ಸ್ಥಾಪಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಉಗ್ರ ಪ್ರತಿಭಟನೆ ‌‌‌ನಡೆಸಲಿದೆ‌ ಎಂದರು.

ಗೃಹಮಂತ್ರಿ ಅರಗ ಜ್ಞಾನೇಂದ್ರ ನಾಲಾಯಕ್

ಗೃಹ ಮಂತ್ರಿ ಅರಗ ಜ್ಞಾನೇಂದ್ರ ನಾಲಾಯಕ್. ಅರಗ ಜ್ಞಾನೇಂದ್ರ ಒಬ್ಬ ಹುಚ್ವು ನಾಯಿ. ಇಡೀ ಪೋಲೀಸ್ ವ್ಯವಸ್ಥೆ ದೇಶಕ್ಕೆ ಮಾದರಿ‌. ಪೊಲೀಸರನ್ನು ನಾಯಿಗೆ ಹೋಲಿಸುರುವುದನ್ನು ಖಂಡಿಸುತ್ತೇವೆ. ರಾಜ್ಯದ ಪೊಲೀಸರು ಎಂಜಲು ಕಾಸು ತಿನ್ನುತ್ತಾರೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾಗಿದೆ. ಈ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಲಾಗಿದೆ. ಅಲ್ಲದೇ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ‌ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಮೈಸೂರಿನಲ್ಲಿ ಜೆಡಿಎಸ್, ಬಿಜೆಪಿಯಿಂದ ಬೆಳ್ಳಿ ಕಾಯಿನ್ ಹಂಚುತ್ತಿದ್ದಾರೆ.

ಪರಿಷತ್ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ. ಲಕ್ಷ್ಮಣ್, ಮೈಸೂರಿನಲ್ಲಿ ಜೆಡಿಎಸ್, ಬಿಜೆಪಿಯಿಂದ ಬೆಳ್ಳಿ ಕಾಯಿನ್ ಹಂಚುತ್ತಿದ್ದಾರೆ ಎಂದು ಬೆಳ್ಳಿ ಕಾಯಿನ್ ಪೋಟೋ ತೋರಿಸಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು. ಧರ್ಮಸ್ಥಳ ಮಂಜುನಾಥ ಸ್ವಾಮಿ ಚಿತ್ರವುಳ್ಳ ಬೆಳ್ಳಿ ಕಾಯಿನ್ ಅನ್ನು ಹಂಚುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿ. ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಈ ನಾಣ್ಯವೂ ಬಿಟ್ ಕಾಯಿನ್ ಮಾದರಿಯಂತೆ ಕಾಣುತ್ತಿದೆ. ಬಿಟ್ ಕಾಯಿನ್ ಗೂ ಈ ನಾಣ್ಯಕ್ಕೂ ಸಂಬಂಧ ಇರುವ ಅನುಮಾನ ಇದೆ ಎಂದು ಎಂ. ಲಕ್ಷ್ಮಣ್ ಹೇಳಿದರು.

Key words: protest – Ambedkar’s- statue -rebuild- KPCC spokesperson- M. Laxman