ಶ್ರವಣಬೆಳಗೊಳ ಜೈನ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ…

ಹಾಸನ,ಸೆ,14,2019(www.justkannada.in):  ಜೈನ ಕಾಶಿ ಶ್ರವಣಬೆಳಗೊಳ ಜೈನ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಜೈನಮಠದ ಕಚೇರಿ ಹಾಗೂ ಡೈನಿಂಗ್ ಹಾಲ್ ಬಳಿಯೇ ಚಿರತೆ ಓಡಾಡಿದೆ. ಚಿರತೆ ಓಡಾಡುತ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲ ದಿನಗಳ ಹಿಂದಷ್ಟೆ ಚಿರತೆ ರಸ್ತೆಗೆ ಬಂದು ನಾಯಿ‌ ಬೇಟೆಯಾಡಿ‌ ಹೋಗಿತ್ತು.  ಕಳೆದ ಮೂರು ದಿನಗಳ ಹಿಂದೆಯೂ ಬೇಟೆಗಾಗಿ ಹೊಂಚು ಹಾಕಿ‌ ಚಿರತೆ ಓಡಾಡುತ್ತಿದ್ದು, ರಾತ್ರಿ ವೇಳೆ ಚಿರತೆ ಸಂಚಾರದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.  ಇನ್ನು ಚಿರತೆಯನ್ನ ಶೀಘ್ರವೇ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Key words: Leopard – shravanabelagola- jain math