ಸಿದ್ಧರಾಮಯ್ಯ ಅವರ ಹೇಳಿಕೆ ತಿರುಚಿ ದಲಿತರ ದಿಕ್ಕು ತಪ್ಪಿಸುವ ಹುನ್ನಾರ ಬಿಜೆಪಿಯದ್ದು- ಆರ್.ಧೃವನಾರಾಯಣ್ ಕಿಡಿ.

ಮೈಸೂರು,ನವೆಂಬರ್,6,2021(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ದಲಿತರ ವಿರುದ್ಧ ಮಾತನಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್,  ಬಿಜೆಪಿಯವರು ಸಿದ್ಧರಾಮಯ್ಯ ಅವರ ಹೇಳಿಕೆ ತಿರುಚಿ ದಲಿತರ ದಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಕೆಲವರು ಅವರ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಸಿಂದಗಿ ಚುನಾವಣೆಯಲ್ಲಿ ಮಾದೀಗ ಜನಾಂಗದ ಸಮ್ಮೇಳನದಲ್ಲಿ ಈ ಹೇಳಿಕೆ ನೀಡಿದ್ದರು. ಆದರೆ ಇದನ್ನ ತಿರುಚಿ ಬಿಜೆಪಿಯವರು ದಲಿತರನ್ನು ದಿಕ್ಕತಪ್ಪಿಸುವ ಹುನ್ನಾರ ಮಾಡಿದ್ದಾರೆ. ಅವರು ದುರುದ್ದೇಶದಿಂದ ಈ ರೀತಿ ತಿರುಚಿದ್ದಾರೆ ಎಂದು ಹರಿಹಾಯ್ದರು.

ಭಾಗವತ್, ಅನಂತ್ ಕುಮಾರ್ ಹೆಗ್ಡೆ, ತೇಜಸ್ವಿ ಸೂರ್ಯ ಸೇರಿ ಅನೇಕರು ಸಂವಿಧಾನದ ತಿದ್ದಪಡಿ ಮಾಡಬೇಕು ಎಂದು ಮಾತನಾಡಿದ್ದರು. ಈ ವೇಳೆ ಬಿಜೆಪಿಯಲ್ಲಿರುವವರು ಮಾತನಾಡಲಿಲ್ಲ. ಇದರಿಂದ ಬಿಜೆಪಿಯಲ್ಲಿರುವ ದಲಿತ ನಾಯಕರು ಎಲ್ಲೋಗಿದ್ರು ಅಂತ ಹೇಳಿದ್ರು. ದಲಿತರನ್ನ ದಿಕ್ಕತಪ್ಪಿಸುವ ಹುನ್ನಾರ‌ ನಡೆಯುತ್ತಿದೆ. ದಲಿತರು ಪ್ರಜ್ಞಾವಂತರಿದ್ದಾರೆ. ಧರ್ಮ ಧರ್ಮದಲ್ಲಿ ಕಂದಕ‌ ನಿರ್ಮಾಣ ಮಾಡುತ್ತಾರೆ. ಯಾವ ಜಾತಿಯವರು ಕಾಂಗ್ರೆಸ್ ಪಕ್ಷದವರ ಜೊತೆ ಇದ್ದಾರೆ ಅವರನ್ನ ಒಡೆದು ಹಾಕಲು ಮುಂದಾಗಿದ್ದಾರೆ. ವ್ಯಕ್ತಿಗೆ ಹೇಳಿದ ಹೇಳಿಕೆಯನ್ನ ಈ ರೀತಿ ಮಾಡಿದ್ದಾರೆ ಎಂದು ಮಾಜಿ ಸಂಸದ ದೃವನಾರಾಯಣ್  ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರವರು ಸಿಎಂ ಆಗಿದ್ದಾಗ ದಲಿತರಿಗೆ ಕೊಟ್ಟ ಕಾರ್ಯಕ್ರಮ ಸ್ಥಾನಮಾನ ಇತಿಹಾಸ ಪುಟದಲ್ಲಿ ಇಡಬಹುದು. ಅಂತವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಅಂಬೇಡ್ಕರ್ ಹೆಸರನ್ನು ದುರುಪಯೋಗ ಬಿಜೆಪಿಯವರು ಮಾಡಿಕೊಳ್ಳುತ್ತಿದ್ದಾರೆ. ಇವರು ಆರ್.ಎಸ್.ಎಸ್ ಗುಲಾಮಗಿರಿ ಮಾಡುತ್ತಿದ್ದಾರೆ‌. ದಲಿತರ ಮೇಲೆ ಕಾಳಜಿ ಇದ್ದರೆ ದಲಿತರ ಪರವಾದ ಕಾನೂನು ತನ್ನಿ. ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾತನಾಡಿದ್ರು. ಆದ್ರೆ ಚುನಾವಣೆ ಮುಗಿದ ನಂತರ ಈ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡಿದ್ದಾರೆ. ಇದರ ಅರ್ಥ ಇವರು ದಲಿತರನ್ನ ಎತ್ತಿಕಟ್ಟುವ ಹುನ್ನಾರ ಇದೆ ಎಂಬುದು ಸ್ಪಷ್ಟವಾಗಿದೆ ಎಂದರು.

ಬಿಟ್ ಕಾಯಿನ್ ವಿಚಾರ ಮರೆಮಾಚಿದ್ದಾರೆ.

ಸಿದ್ದರಾಮಯ್ಯ ಮಾಸ್ ಲೀಡರ್. ಜನಪರ‌ ಕಾಳಜಿ ಇರುವ ನಾಯಕ. ಇದಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಹುನ್ನಾರ ಮಾಡಲಾಗುತ್ತಿದೆ. ಚುನಾವಣೆ ಸೋತ ನಂತರ ಈ ವಿಚಾರವನ್ನ ತೆಗೆದಿದ್ದಾರೆ. ಬಿಟ್ ಕಾಯಿನ್ ವಿಚಾರ ಮರೆಮಾಚಿದ್ದಾರೆ. ಇದನ್ನ ಹೊರತೆಗೆದ್ರೆ ದೊಡ್ಡ ನಾಯಕರ ಹೆಸರು ಹೊರಬರುತ್ತೆ ಎಂದು ಮಾಜಿ ಸಂಸದ ದೃವನಾರಾಯಣ್  ಟಾಂಗ್ ನೀಡಿದರು.

ಭಾರತಕ್ಕಿಂತ ಪಾಕಿಸ್ತಾನ ಹಸಿವು ನೀಗಿಸುವಲ್ಲಿ ಮುಂಚೂಣಿಯಲ್ಲಿದೆ.

ಹಾಗೆಯೇ ಭಾರತಕ್ಕಿಂತ ಪಾಕಿಸ್ತಾನ ಹಸಿವು ನೀಗಿಸುವಲ್ಲಿ ಮುಂಚೂಣಿಯಲ್ಲಿದೆ. ಹಸಿವಿನ ಪ್ರಮಾಣದಲ್ಲಿ ಭಾರತದ ರ್ಯಾಂಕಿಂಗ್ 101 ಇದೆ. ಭಾರತಕ್ಕಿಂತಲೂ ಬಾಂಗ್ಲಾದೇಶದ ಹಸಿವಿನ ಪ್ರಮಾಣ ಕಡಿಮೆ ಇದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲೂ ಕಡಿಮೆ ಇದೆ. ವರ್ಲ್ಡ್ ಅಂಗರ್ ಇಂಡೆಕ್ಸ್ ಸಮೀಕ್ಷೆ ಪ್ರಕಾರ ನಮ್ಮ ದೇಶ 101ನೇ ಸ್ಥಾನದಲ್ಲಿದೆ. ನಿಮ್ಮ ಗಮನ ಹಸುವು ಮುಕ್ತ ಭಾರತ ಮಾಡುವತ್ತ ಇರಲಿ ಎಂದು ಬಿಜೆಪಿ ನಾಯಕರನ್ನ ಕುಟುಕಿದರು. ಹಾಗೆಯೇ ಹಸಿವು ಮುಕ್ತ ಕರ್ನಾಟಕ ಮಾಡಲು ಸಿದ್ದರಾಮಯ್ಯ ಕಾರ್ಯಕ್ರಮ ನೆರವಾಗಿದ್ದವು ಎಂದರು.

Key words: Siddaramaiah-statement – BJP – misleading – distracting- Dalits-KPCC- R. Dhruvanarayan

ENGLISH SUMMARY….

BJP is trying to mislead Dalits by misquoting Siddaramaiah’s statement: R. Dhruvanarayan
Mysuru, November 6, 2021 (www.justkannada.in): In his response to the BJP’s allegations, stating that the former Chief Minister Siddaramaiah has spoken against Dalits, the KPCC Working President R. Dhruvanarayan today retaliated that the BJP is attempting to mislead the Dalits by misquoting the former Chief Minister.
Speaking to the press persons today in Mysuru, he noted that, during the Madiga community conference held at Sindhagi, Siddaramaiah had just told that a few persons had joined the BJP with self-interest. But the BJP people are misquoting his words and trying to mislead the Dalits, he said.
“Bhagwat, Anant Kumar Hegde, Tejaswi Surya, and a few other BJP leaders had told that Constitution should be changed. The BJP leaders had not responded to it then. Where had the BJP Dalit leaders gone then? It is nothing but an attempt to mislead the Dalits. But their attempt will not become successful as the Dalits have become literates now. Sowing seeds of hatred and dividing religions is BJP’s job. They always notice which caste people are in Congress and try to divide them,” Dhruvanarayan observed.
Keywords: KPCC Working President/ R. Dhruvanarayan/ BJP/ misquoted/ Siddaramaiah