ಪುನೀತ್ ಕಣ್ಣಲ್ಲಿ ಕಣ್ಣಿಟ್ಟು  ಮಾತನಾಡಿದ್ರು: ಮರುದಿನ ಕಣ್ಣು ದಾನ ಮಾಡಿದ್ದಾರೆ ಅಂದ್ರೆ ನಂಬಲು ಆಗ್ತಿಲ್ಲ-ಅಪ್ಪು ನೆನೆದು ಭಾವುಕರಾದ ನಟ ರಮೇಶ್ ಅರವಿಂದ್ .

ಬೆಂಗಳೂರು,ನವೆಂಬರ್,6,2021(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವಾರ ಕಳೆದರೂ ಸಹ ಅವರ ಸಾವಿನ ಸುದ್ಧಿಯನ್ನ ಅಭಿಮಾನಿಗಳು, ಕಲಾವಿದರು ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಮಧ್ಯೆ ನಟ ರಮೇಶ್ ಅರವಿಂದ್ ಅವರು ಅಪ್ಪು ಜತೆಗಿನ ಕೊನೆ ಕ್ಷಣ ನೆನೆಪಿಸಿಕೊಂಡು ಭಾವುಕರಾದರು.

ಗುರುಕಿರಣ್ ಅವರ ಮನೆಯಲ್ಲಿ ಕಾರ್ಯಕ್ರಮದಲ್ಲಿ ಎರಡು ಗಂಟೆ ಮಾತನಾಡಿದ್ವಿ. ಆಗ ಪುನೀತ್ ರಾಜ್ ಕುಮಾರ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಆದರೆ ಮರು ದಿನ ಕಣ್ಣು ದಾನ ಮಾಢಿದ್ದಾರೆ ಅಂದ್ರೆ ನಂಬೋಕೆ ಆಗಲ್ಲ ಎಂದು ನಟ ರಮೇಶ್ ಅರವಿಂದ್  ಅಪ್ಪು ಜತೆಗಿನ ಒಟನಾಟವನ್ನ ಸ್ಮರಿಸಿದರು.

ನಟ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬುವುದು ಬಹಳ ಕಷ್ಟ. ಮುಂದಿನ ದಿನಗಳಲ್ಲಿ ಒಳ್ಳೆಯ ಡ್ಯಾನ್ಸ್ ಸಿಗಬಹುದು. ಒಳ್ಳೆಯ ವ್ಯಕ್ತಿ, ಒಳ್ಳೆಯ ನಟ ಸಿಗಬಹದು. ಆದರೆ ಎಲ್ಲಾ ಗುಣಗಳನ್ನ ಹೊಂದಿದ್ಧ ಪುನೀತ್ ರಾಜ್ ಕುಮಾರ್ ಸಿಗುವುದು ಕಷ್ಟ. ನಾವು ಇಷ್ಟಪಡೋರನ್ನ ಒಂದು ದಿನ  ಕಳೆದುಕೊಳ್ಳುತ್ತೇವೆ. ಬುದ್ಧ ಹೇಳಿದ ಮಾತುಗಳನ್ನ  ನಾವು ಅಂದು ಚರ್ಚಿಸಿದ್ದವು ಎಂದು ಅಪ್ಪು ಜತೆಗೆ ಕಳೆದ ಕ್ಷಣವನ್ನ ನೆನಸಿಕೊಂಡರು.

Key words: actor-Punith raj kumar-actor-ramesh arvind- Memory