ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ಪ್ರತಿಮೆ ಅನಾವರಣ : ಪ್ರಧಾನಿಗೆ ಅಭಿನಂದನೆ.

ಮೈಸೂರು, ಡಿ.14, 2021 : (www.justkannada.in news) 17 ನೇ ಶತಮಾನದಲ್ಲಿ ಕಾಶಿ ಪುನರ್ ನಿರ್ಮಾಣ ಮಾಡಿದ ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ರ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಜನತಾ ಪಾರ್ಟಿಯ ಮೈಸೂರು ಮಹಾನಗರ ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿ ಮಂಜು ಧನ್ಯವಾದ ಹೇಳಿದ್ದಾರೆ.
ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ರವರು ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಹಲ್ಯ ಬಾಯಿ ಹೋಳ್ಕರ್ ರವರನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ ಹಾಗೂ ಇತಿಹಾಸ ತಿರುಚಿರುತ್ತಾರೆ ಎಂದು ತಿಳಿಸಿದ್ದರು. ಆದರೆ ಮಾಜಿ ಸಚಿವ ವಿಶ್ವನಾಥ್ ಅವರಿಗೆ ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ಮಂಜು ಟೀಕಿಸಿದ್ದಾರೆ.
ಕಾಶಿ ದೇವಾಲಯದ ಕಾರಿಡಾರಿನಲ್ಲಿ ಬೃಹತ್ತಾದ ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆಯನ್ನು ನಿರ್ಮಾಣ ಮಾಡಿಸಿ ಅದರ ಲೋಕಾರ್ಪಣೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಕಳೆದ ಹತ್ತು ವರ್ಷದಲ್ಲಿ ಕಾಶಿಯಲ್ಲಿ ಗಂಗೆ ಮಲಿನ ವಾಗಿದ್ದಳು ಆದರೆ ಇಂದು ಸಾವಿರಾರು ಕೋಟಿ ವೆಚ್ಚದಲ್ಲಿ ಸ್ವಚ್ಛತೆ ಕಾಣುತ್ತಿದೆ.
ವಿಶ್ವನಾಥ ರವರು ಹೇಳಿದಂತೆ ಇತಿಹಾಸ ತಿರುಚುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಎಚ್ವಿ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ. ಈ ರೀತಿ ಇಲ್ಲ ಸಲ್ಲದ ವಿಚಾರವನ್ನು ಜನರಿಗೆ ತಿಳಿಸುವುದು ಸರಿಯಲ್ಲ, ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.

key words : mysore-bjp-obc-morcha-jogi-manju