ಕರೀನಾ ಕಪೂರ್​​’ಗೆ ಕೊರೊನಾ ಸೋಂಕು: ಚೇತರಿಸಿಕೊಳ್ಳುತ್ತಿದ್ದೇನೆ ಎಂಬ ನಟಿ

ಬೆಂಗಳೂರು, ಡಿಸೆಂಬರ್ 14, 2021 (www.justkannada.in): ಬಾಲಿವುಡ್ ನಟಿ ಕರೀನಾ ಕಪೂರ್​​ಗೆ ಕೊರೊನಾ ಪಾಸಿಟಿವ್ ಸುದ್ದಿ ಕೇಳಿ ಆತಂಕಕ್ಕೀಡಾಗಿದ್ದ ಅಭಿಮಾನಿಗಳಿಗೆ ಅವರ ಆರೋಗ್ಯದ ಕುರಿತು ಮಾಹಿತಿ ಹೊರಬಿದ್ದಿದೆ.

ಬಾಲಿವುಡ್​ ಖ್ಯಾತ ನಟಿ ಕರೀನಾ ಕಪೂರ್ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಜತೆಗೆ ಅವರ ಗೆಳತಿ ಅಮೃತಾ ಅರೋರಾಗೂ ಸೋಂಕು ದೃಢ ಪಟ್ಟಿದೆ.

ಕರೀನಾ ಆರೋಗ್ಯದ ಬಗ್ಗೆ ಸದ್ಯ ಅವರ ತಂದೆ ಮಾಹಿತಿ ನೀಡಿದ್ದು, ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಕೊರೊನಾ ಪಾಸಿಟಿವ್ ಆಗಿದ್ದರ ಕುರಿತು ಕರೀನಾ ಸ್ವತಃ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ”ನನಗೆ ಕೊರೊನಾ ಪಾಸಿಟಿವ್ ಆಗಿದೆ. ತಕ್ಷಣವೇ ಪ್ರತ್ಯೇಕ ವಾಸದಲ್ಲಿ ತೊಡಗಿಕೊಂಡಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿದ್ದೇನೆ ಎಂದು ತಿಳಿಸಿದ್ದರು.

ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ. ನನ್ನ ಕುಟುಂಬ ಹಾಗೂ ಸಹಾಯಕರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಯಾರಿಗೂ ರೋಗ ಲಕ್ಷಣವಿಲ್ಲ. ನಾನೂ ಕ್ಷೇಮವಾಗಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಬರೆದುಕೊಂಡಿದ್ದರು.