ರಶ್ಮಿಕ ಮಂದಣ್ಣ  ಎನ್ನುವ ಬದಲು ಮಂಡೂಕ ಎಂದ ಚಿರಂಜೀವಿ…

ಹೈದರಾಬಾದ್,ಜ,11,2020(www.justkannada.in):   ತೆಲುಗಿನ ಪ್ರಿನ್ಸ್ ಮಹೇಶ್ ಬಾಬು  ‘ಸರಿಲೇರು ನೀಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ ಇದೀಗ ‘ಮಂಡೂಕ’ ಎಂದು ಟ್ರೋಲ್ ಆಗುತ್ತಿದ್ದಾರೆ.

‘ಸರಿಲೇರು ನೀಕೆವ್ವರು’  ಚಿತ್ರದ ಟ್ರೈಲರ್ ರಿಲೀಸ್ ಗೆ ಮುಖ್ಯ ಅತಿಥಿಯಾಗಿ ‘ಮೆಗಾ ಸ್ಟಾರ್’ ಚಿರಂಜೀವಿ ಆಗಮಿಸಿದ್ದರು. ಈ ವೇಳೆ ಚಿರಂಜೀವಿಗೆ ರಶ್ಮಿಕಾ ಮಂದಣ್ಣ ಎಂದು ಗೊತ್ತಿಲ್ಲ. ಅವರು ರಶ್ಮಿಕಾ ಮಂದಣ್ಣ ಅವರನ್ನು ರಶ್ಮಿ ಮಂಡೂಕ ಎಂದಿದ್ದಾರೆ.

ಅದೇನೋ ರಶ್ಮಿ ಮಂಡೂಕ ಅವರು ನನ್ನನ್ನು ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆ ಅನಿಸುತ್ತಿದೆ. ಏಕೆಂದರೆ ‘ಚಲೋ ಸಿನಿಮಾದ ಕಾರ್ಯಕ್ರಮಕ್ಕೆ ಹೋದರೆ, ಇವರೇ ನಾಯಕಿ. ‘ಗೀತಾ ಗೋವಿಂದಂ’ ಚಿತ್ರದ ಕಾರ್ಯಕ್ರಮಕ್ಕೆ ಹೋದಾಗ ಇವರೇ ನಾಯಕಿ. ಇದೀಗ ಸರಿಲೇರು ನೀಕೆವ್ವರು ಚಿತ್ರದಲ್ಲೂ. ಏನಮ್ಮಾ ನನ್ನನ್ನು ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದೀಯಾ” ಎಂದು ಚಿರಂಜೀವಿ ಕೇಳಿದ್ದಾರೆ

Mandukka is a Chiranjeevi instead of Rashmika Mandanna.