ಮೈಸೂರು ವಿವಿಯ ಹೆಮ್ಮೆಯ ಗರಿ ಯುಪಿಇ ಯೋಜನೆ – ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಆಗಸ್ಟ್,28,2021(www.justkannada.in):  ಯುಪಿಇ ಯೋಜನೆಗೆ 2010ರಲ್ಲಿ ಅನುಮತಿ ಸಿಕ್ಕಿತು. ಈ ಅವಕಾಶ ಸಿಕ್ಕಿದ ರಾಜ್ಯದ ಮೊದಲ ವಿವಿ ಮೈಸೂರು. ಈ ಹಿನ್ನೆಲೆಯಲ್ಲಿ ಇದು ಮೈಸೂರು ವಿವಿಗೆ ಹೆಮ್ಮೆಯ ಗರಿ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದ ಸಮ್ಮೇಳನ ಕೊಠಡಿಯಲ್ಲಿ ನಡೆದ ಯುಜಿಸಿ-ಯುಪಿಇ ಯೋಜನೆಯ ಕಾರ್ಯಕಾರಿ ಸಮಿತಿ ಕರ್ನಾಟಕ ರಾಜ್ಯದ ಸಾಮಾಜಿಕ ಅಭಿವೃದ್ಧಿ ಮತ್ತು ಮಾಧ್ಯಮ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ವಿಜ್ಞಾನ ಮತ್ತು ಕಲಾ ವಿಭಾಗಕ್ಕೆ ಸಂಶೋಧನಾ ಕಾರ್ಯಕ್ಕೆಂದೇ ಯುಪಿಇ ಯೋಜನೆ ಅನುಷ್ಠಾನಕ್ಕೆ ಬಂದಿತು. 5 ವರ್ಷದ ಯೋಜನೆ ಇದಾಗಿತ್ತು. ಆದರೆ, ನಂತರ 5 ವರ್ಷ ವಿಸ್ತರಣೆ ಆಯಿತು. ಪ್ರಸ್ತುತ 10 ವರ್ಷಗಳ ಸಂಶೋಧನೆಯನ್ನು 15 ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಇದು ಪತ್ರಿಕೋದ್ಯಮ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನ್ಯಾಕ್‌ ಗೆ ಮೈಸೂರು ವಿವಿ ಹೋಗುತ್ತಿರುವುದರಿಂದ ಇದೆಲ್ಲಾ ಅನುಕೂಲಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಎನ್‌ಆರ್ ಎ (ನಾಷನಲ್ ರಿಸರ್ಜ್  ಪೌಂಡೇಶನ್ ) ಯೋಜನೆಯೂ ಮೂಲಕವೂ ಸಾಕಷ್ಟು ಅನುಕೂಲ ಲಭಿಸಲಿ ಎಂದು ಆಶಿಸುವೆ ಎಂದರು.

ಮಾಧ್ಯಮ ತಜ್ಞೆ ಪ್ರೊ.ಎನ್.ಉಷಾರಾಣಿ ಮಾತನಾಡಿ, ಯೋಜನೆ ಅಡಿ 15 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. 18 ಸಾವಿರಕ್ಕೂ ಹೆಚ್ಚು ಕುಟುಂಬಗಳ ಸ್ಟಡಿ ಮಾಡಿ ಸ್ಯಾಂಪಲ್ ರೆಡಿ ಮಾಡಲಾಗಿದೆ. ಸಾಮಾಜಿಕ ಅಭಿವೃದ್ಧಿಗೆ ಮಾಧ್ಯಮ ಪಾತ್ರ ಎಷ್ಟಿದೆ ಎಂಬುದೇ ಅಧ್ಯಯನ ಪ್ರಮುಖ ಉದ್ದೇಶವಾಗಿತ್ತು. ಒಳಗೊಳ್ಳುವಿಕೆ ಮತ್ತು ಬಹುತ್ವಕ್ಕೂ ಮಹತ್ವ ನೀಡಲಾಗಿದೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ, ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ರಾಜ್ಯಶಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಮುಜಾರ್ ಅಸ್ಸಾದಿ, ಮಾಧ್ಯಮ ತಜ್ಞೆ ಪ್ರೊ.ಎನ್.ಉಷಾರಾಣಿ, ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಘಿ, ಸಹ ಪ್ರಾಧ್ಯಾಪಕಿ ಡಾ.ಮಮತಾ ಸೇರಿದಂತೆ ಇತರರು ಇದ್ದರು.

ENGLISH SUMMARY…

UPE program pride of UoM: Prof. G. Hemanth Kumar
Mysuru, August 28, 2021 (www.justkannada.in): “The University of Mysore is the first to receive project under the UPE Program, which was approved in 2010. Hence, it is a pride for our University,” opined Prof. G. Hemanth Kumar, Vice-Chancellor, University of Mysore.
He released the Karnataka State Social Development and Media Report, at a program organized by the UGC-UPE program Executive Committee, held at the Vignana Bhavana auditorium in Manasagangotri today.
Speaking on the occasion, he informed that the objective of implementing the UPE program was to encourage research works in science and arts divisions. “It was a five-year program, which was extended for another five years. The ten years of research works are published in the form of 15 books. There is no doubt that these books will be of immense help to journalism and research students. I wish we will get more advantage through the National Research Foundation program too in the coming days,” he added.
Prof. Y.S. Siddegowda, Vice-Chancellor, Tumakuru University, Prof. Lingaraj Gandhi, Vice-Chancellor, Bangalore University, Prof. Muzzafar Assadi, Professor, Political Science Department, Prof. N. Usharani, Media Expert, Dr. M.S. Sapna, Professor, Dr. Mamatha, Assistant Professor, and others were present.
Keywords: University of Mysore/ UPE program/ Prof. G. Hemanth Kumar

Key words: Mysore university- proud –feather- UPE project-Prof. G. Hemanth Kumar