ಮೈಸೂರಿನ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್.

ಹುಬ್ಬಳ್ಳಿ,ಆಗಸ್ಟ್,28,2021(www.justkannada.in):  ಮೈಸೂರಿನಲ್ಲಿ ನಡೆದ ದರೋಡೆ ಪ್ರಕರಣ ಮತ್ತು ಗ್ಯಾಂಗ್ ರೇಪ್ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್,  ರಾಜ್ಯದಲ್ಲಿ ಕಾನೂನು ಸುವ್ಯವಬಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೈಸೂರಿನಲ್ಲಿ ಹಾಡಹಗಲೇ ಶೂಟೌಟ್ ಮತ್ತು ದರೋಡೆ ನಡೆದಿದೆ.   ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಇನ್ನು   ವಿವಿ ಆವರಣದಲ್ಲಿ ಸಂಜೆ ಓಡಾಡಬಾರದು ಎಂದು ಆದೇಶ ಮಾಡಿದೆ . ಇಂತಹ ಆದೇಶಗಳು ಏನನ್ನು ಸೂಚಿಸುತ್ತವೆ ಎಂದು ಹರಿಹಾಯ್ದರು.

ಗೃಹ ಸಚಿವರ ಹೇಳಿಕೆ ನಿಸ್ಸಹಾಯಕತೆ ತೋರುತ್ತದೆ. ಮೈಸೂರಿನ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ಆರ್.ಧೃವನಾರಾಯಣ್ ವಾಗ್ದಾಳಿ ನಡೆಸಿದರು.

Key words: state government – directly- responsible – inccident –Mysore-KPCC-work President -R. Dhruvanarayan