ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಎಬಿಡಿ ಮರಳುವ ಮುನ್ಸೂಚನೆ

ಬೆಂಗಳೂರು, ಜನವರಿ 15, 2020 (www.justkannada.in): ಎಬಿ ಡಿವಿಲಿಯರ್ಸ್‌ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮುನ್ಸೂಚನೆ ನೀಡಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿರುವ ಎಬಿ ಡಿವಿಲಿಯರ್ಸ್ ಬಳಿಕ ಟಿ20 ಲೀಗ್‌ಗಳತ್ತ ಸಂಪೂರ್ಣ ಗಮನವನ್ನು ನೀಡಿದ್ದರು.

ಇದೇ ಮೊದಲ ಬಾರಿಗೆ ಡಿ ವಿಲಿಯರ್ಸ್ ಬಿಗ್ ಬ್ಯಾಷ್ ಲೀಗ್‌ನಲ್ಲೂ ಪಾಲ್ಗೊಂಡಿದ್ದಾರೆ.
ಇಂದು ಬಿಗ್‌ಬ್ಯಾಷ್‌ನಲ್ಲಿ ಪದಾರ್ಪಣಾ ಪಂದ್ಯವನ್ನು ಆಡಿದ್ದಾರೆ ಎಬಿ ಡಿವಿಲಿಯರ್ಸ್.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಟೂರ್ನಿಯ ಮೊದಲ ಪಂದ್ಯದಲ್ಲಿ ಡಿವಿಲಿಯರ್ಸ್ 40 ರನ್ ಸಿಡಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾದರು. ಈ ಪಂದ್ಯದ ಬಳಿಕ ಎಬಿಡಿ ಮಾತನಾಡುತ್ತಾ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುವ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.