ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್: ರಾಜ್ಯದಲ್ಲಿ 60 ಕಡೆ ಏಕಕಾಲಕ್ಕೆ ದಾಳಿ, ಪರಿಶೀಲನೆ.

ಬೆಂಗಳೂರು,ನವೆಂಬರ್,24,2021(www.justkannada.in):  ಬೆಳಂಬೆಳಗ್ಗೆ  ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ(ACB) ಶಾಕ್ ನೀಡಿದ್ದು ರಾಜ್ಯದ 60 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ, ಕಲಬುರಗಿ, ಬೆಳಗಾವಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ  60 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೆಎಎಸ್ ಅಧಿಕಾರಿ ನಾಗರಾಜ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಯಲಹಂಕದ ಸರ್ಕಾರಿ ಆಸ್ಪತ್ರೆ ಫಿಸಿಯೊಥೆರಪಿಸ್ಟ್ ರಾಜಶೇಖರ್ , ಬಿಬಿಎಂಪಿ ಅಧಿಕಾರಿ ಮಾಯಣ್ಣ ಸೇರಿದಂತೆ 15 ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.ACB -attack – BBMP- officer-house

ಲೋಕೋಪಯೋಗಿ ಇಲಾಖೆಯ ಜೆ.ಇ. ಶಾಂತಗೌಡ ಬಿರಾದಾರ್‌ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿನ ಪಿಡಬ್ಲೂಡಿ ಜೆ.ಇ. ಶಾಂತಗೌಡ ಬಿರಾದಾರ್‌ ಅವರ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳು, ಜೆ.ಇ. ಶಾಂತಗೌಡ ಬಿರಾದಾರ್‌ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆರ್‌ಟಿಒ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್‌ ಸದಾಶಿವ ಮರಲಿಂಗಣ್ಣನವರ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ, ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮನೆ ಸೇರಿ ಒಟ್ಟು 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Key words: ACB -Shock -Officers – morning-attacks -verification

ENGLISH SUMMARY

Bangalore,nov,24,2021(www.justkannada.in) Today ACB has conducted search in 60 places with respect to disproportionate of assets cases registered against 15 officers by team of 8 SPs, 100 officers and 300 staff .

1.K .S .Lingegowda.
Executive Engineer.
Smart City .Mangalore.

2.Srinivas .K. Executive Engineer. HLBC.Mandya.

3.Lakshminarashimaiah .
RevenueInspector.
Dodballapur.

4. Vasudev. Ex Project Manager.Nirmiti Kendra.Banglore.

5.B.Krishnareddy .General Manager.Nandini Dairy.Bengaluru.

6.T.S.Rudreshappa.
Joint Director ,
Agriculture Department. Gadag.

7.A.K.Masti .
cooperative Development Officer.
Savadatti deputation Bsilahongala.

8.Sadashiv Maralingannanavar.
Senior Motar Inspector.Gokak.

9.Nathaji Heeraji Patil. Group C.Belgaum.Hescom.

10.K.S.Shivanand
Red.Subregistrar.Brllary Retd July 2021.

11.Rajashekar .Physiotherapist. Government Hospital.Yelahanka.

12.Mayanna.M .FDC.BBMP.Major Roafs and Infrastructure.Banglore.

13.L.C.Nagaraj.Administrative Officer.Sakala. Bengaluru.

14.G.V.Giri.Group.D.
BBMP.
yeshwanthpura .Bengaluru.

15.S.M..Biradar.
Junior Engineer.PWD Department.
Jevargi.

Searches started and our officers are verifying the documents ..