ಬೆಂಗಳೂರು,ಸೆಪ್ಟಂಬರ್,3,2026 (www.justkannada.in): ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹದಿನೇಳು ಕೋಟಿ ರೂ. ಫೇಕ್ ನೋಟ್ ಪತ್ತೆಯಾಗಿದೆ ಈಗ ಯಾರು ರಾಜೀನಾಮೆ ಕೊಡ್ತಾರೆ? ಎಂದು ಬಿಜೆಪಿಗೆ ಸಚಿವ ಸಂತೋಷ್ ಲಾಡ್ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹದಿನೇಳು ಕೋಟಿ ರೂ, ಫೇಕ್ ನೋಟ್ ಪತ್ತೆಯಾಗಿದೆ ಈಗ ಯಾರು ರಾಜೀನಾಮೆ ಕೊಡ್ತಾರೆ? ಬಿ. ನಾಗೇಂದ್ರ ಬಗ್ಗೆ ಎಷ್ಟು ಪ್ರತಿಭಟನೆ ಮಾಡಿದ್ರಲ್ಲಾ ಈಗ ಇದರ ಬಗ್ಗೆ ಬಿವೈ ವಿಜಯೇಂದ್ರ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಭಾರತದ ಜಿಡಿಪಿ 7.8 ತಲುಪಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್ 7.8 ಜಿಡಿಪಿ ತಲುಪಿದ್ರೆ ಸ್ಟಾಕ್ ಮಾರ್ಕೆಟ್ ನಲ್ಲಿ ಕಾಣಬೇಕಲ್ವಾ? ಎಂದು ಕುಟುಕಿದರು.
ಉತ್ತರ ಪ್ರದೇಶದ ಸಹಾರನ್ಪುರದ ಗಂಟಾಘರ್ನಲ್ಲಿರುವ ಸೋಫಿಯಾ ಮಾರ್ಕೆಟ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶಾಖೆಯ ಕರೆನ್ಸಿ ಚೆಸ್ಟ್ನಲ್ಲಿ ನಕಲಿ ನೋಟುಗಳು ಪತ್ತೆಯಾಗಿತ್ತು.
Key words: 17 crores, PNB. Fake note, Minister, Santosh Lad







