Friday, August 7, 2026

BDA Apartments

Home Front Page ನಾಳೆ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಘೋಷಣೆ.

ನಾಳೆ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಘೋಷಣೆ.

ಬೆಳಗಾವಿ,ಏಪ್ರಿಲ್,13,2023(www.justkannada.in):  ಅಥಣಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ಹೈಕಮಾಂಡ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಾಳೆ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಲಕ್ಷ್ಮಣ್ ಸವದಿ, ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ಇದೆ. ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇನೆ. ನಾಳೆ ಎಂಎಲ್ ಸಿ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದರು.

ಸಿಎಂ ಬೊಮ್ಮಾಯಿ ಗಟ್ಟಿಯಾಗಿ ನನ್ನ ಪರ ನಿಂತಿದ್ರೆ ಟಿಕೆಟ್ ಸಿಗುತಿತ್ತು ನನ್ನನ್ನ ಡಿಸಿಎಂ ಮಾಡಿ ಅರ್ಧಕ್ಕೆ ತೆಗೆದರು  ಏನು ಅಪರಾಧ ಮಾಡಿದೆ ಅಂತಾ ಸ್ಥಾನ ಕಿತ್ತುಕೊಂಡರು.  ಬೊಮ್ಮಾಯಿ ನನ್ನ ಪರ ಗಟ್ಟಿಯಾಗಿ ನಿಲ್ಲಿಲ್ಲ. ಸಿಎಂ ಬೊಮ್ಮಾಯಿ ಒತ್ತಡ ಹೇರಿದ್ರೆ ಟಿಕೆಟ್ ಸಿಗುತ್ತಿತ್ತು.  ಅಣ್ಣಾ ಸಾಹೇಬ್ ಸ್ನೇಹಿತರಾಗಿ ಭೇಟಿ ನೀಡಿದ್ದರು. ಈಗ ಸಂದಾಯ ಸಮಯ ಮುಗಿದಿದೆ . ಕ್ಷೇತ್ರದ ಜನರೇ ನನ್ನ ಹೈಕಮಾಂಡ್ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: I will -resign – BJP –tomorrow- Former DCM- Laxman Savadi