ನಾಗಶೇಖರ್ ಮೈನಾ ಈಗ Colorfull !

ಬೆಂಗಳೂರು, ಜುಲೈ 27, 2019 (www.justkannada.in): ‘ಅಮರ್’ ಚಿತ್ರದ ಬಳಿಕ ನಿರ್ದೇಶಕ ನಾಗಶೇಖರ್ ಬಾಲಿವುಡ್ ಗೆ ಹೋಗುತ್ತಿರುವಾಗಿ ಹೇಳಿದ್ದರು.

ಇದೀಗ ಅವರು ಹಿಂದಿ ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ತಮ್ಮ ಚೊಚ್ಚಲ ಹಿಂದಿ ಚಿತ್ರದ ಟೈಟಲ್ ಅನ್ನು ರಿಲೀಸ್ ಮಾಡಿದ್ದಾರೆ.

ನಾಗಶೇಖರ್ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಚಿತ್ರಕ್ಕೆ ‘ಕಲರ್ ಫುಲ್’ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ರ ಮಗ ಭವಿಶ್ ರನ್ನು ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ.