ಪೊಲೀಸ್ ಪಾತ್ರ, ಖದರ್ ಲುಕ್! ಇದು ಡಾಲಿ ಧನಂಜಯ ಸ್ಟೈಲ್

ಬೆಂಗಳೂರು, ಜುಲೈ 27, 2019 (www.justkannada.in): ಧನಂಜಯ್ ಎಸಿಪಿ ಸಮರ್ತ್ ವೇಷದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

‘ಸಲಗ’ ಸಿನಿಮಾದಲ್ಲಿ ಧನಂಜಯ್ ಪೋಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಕೆಲವು ಫೋಟೋಗಳನ್ನು ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧನಂಜಯ್ ಲುಕ್ ಖದರ್ ಆಗಿದೆ. ಈ ಪಾತ್ರಕ್ಕಾಗಿ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಧನಂಜಯ್ ಅಭಿಮಾನಿಗಳಿಗೆ ಅವರ ಲುಕ್ ಬಹಳ ಇಷ್ಟ ಆಗಿದೆ. ಮೊದಲ ಬಾರಿಗೆ ಧನಂಜಯ್ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.