ತಮಿಳುನಾಡು ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ.

ಮಂಡ್ಯ,ಆಗಸ್ಟ್,17,2023(www.justkannada.in): ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಇದೀಗ ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ.

ಆಗಸ್ಟ್ 13ರ ಬೆಳಗ್ಗೆ 5,243 ಕ್ಯೂಸೆಸ್ ನೀರು ಬಿಡಲಾಗುತ್ತಿತ್ತು. ಇಂದಿನಿಂದ ಕಾವೇರಿ ನದಿಗೆ 12,718 ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ. ತಮ್ಮ ಪಾಲಿನ ಕಾವೇರಿನ ನೀರನ್ನ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಸುಪ್ರೀಂಕೋರ್ಟ್ ನಿಂದ ಆದೇಶಕ್ಕೂ ಮೊದಲೇ ರಾಜ್ಯಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ.

Key words: state government -Tamil Nadu – water- release – Kaveri river.