ಚಾಮುಂಡಿಬೆಟ್ಟವನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ: ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡಿದ್ರೆ ದಂಡ.

ಮೈಸೂರು,ಆಗಸ್ಟ್,17,2023(www.justkannada.in):  ಮೈಸೂರಿನ  ಚಾಮುಂಡಿಬೆಟ್ಟವನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡಿದ್ರೆ ದಂಡ ಬೀಳಲಿದೆ.

ಹೌದು ಚಾಮುಂಡಿ ಬೆಟ್ಟದಲ್ಲಿ  ಪ್ಲಾಸ್ಟಿಕ್ ಬಿಸಾಕಿದರೆ 500 ರೂ ದಂಡ ವಿಧಿಸಲಾಗುತ್ತದೆ. ಇನ್ನು ಚಾಮುಂಡಿಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮೊದಲ ಬಾರಿಗೆ ತ್ಯಾಜ್ಯ ಬಿಸಾಡಿದರೆ 2,500 ದಂಡ, ಎರಡನೇ ಬಾರಿಗೆ 5 ಸಾವಿರ ಹಾಗೂ ಮೂರನೇ ಬಾರಿಗೆ 10 ಸಾವಿರ ಹಾಗೂ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಸೂಚಿಸಲಾಗಿದೆ.

ಇನ್ನು ಅರಣ್ಯದ ಒಳಗೆ ತೆರಳಿದರೆ 500 ದಂಡ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ದಂಡ ವಿಧಿಸಲು ಪ್ಲ್ಯಾನ್​ ಮಾಡಲಾಗಿದ್ದು, ಸೆಪ್ಟೆಂಬರ್ 1 ರಿಂದ ಈ ಆದೇಶ ಜಾರಿಯಾಗಲಿದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದಾರೆ.

ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮದ್ಯ ಹಾನಿಕಾರಕ ವಸ್ತು ಸಾಗಿಸಿದರೆ 5 ಸಾವಿರ ದಂಡ, ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ದಂಡ ವಿಧಿಸಲು ನಿರ್ಧರಿಸಿದ್ದಾರೆ.

Key words: Action –fine- Chamundi hill -garbage – plastic –free