ಅಮೇಥಿಯಲ್ಲಿ ಸೋತ ಅನುಭವದ ಮೇಲೆ ಸಿದ‍್ಧರಾಮಯ್ಯಗೆ ರಾಹುಲ್ ಗಾಂಧಿ ಸಲಹೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ವಿಜಯಪುರ,ಮಾರ್ಚ್,18,2023(www.justkannada.in): ರಾಹುಲ್ ಗಾಂಧಿಗೆ ಉತ್ತರ ಪ್ರದೇಶ ಅಮೇಥಿಯಲ್ಲಿ ಸೋಲಿನ ಅನುಭವವಿದೆ. ಹೀಗಾಗಿ ಸಿದ್ಧರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸದಂತೆ ಸಲಹೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ವಿಜಯಪುರದಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಪ್ರದೇಶ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದ ರಾಹುಲ್ ಗಾಂಧಿ ಸೋತಿದ್ದಾರೆ. ಈ ಅನುಭವದ ಆಧಾರದ ಮೇಲೆ ಸಿದ್ಧರಾಮಯ್ಯಗೆ ಕೋಲಾರದಿಂಧ ಸ್ಪರ್ಧೆ ಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಟೀಕಿಸಿದರು.

ಈಶಾನ್ಯ ಭಾರತದಲ್ಲಿ ಒಂದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಿಲ್ಲ. ಕಾಂಗ್ರೆಸ್ ಅಷ್ಟರ ಮಟ್ಟಿಗೆ ಸೋತು ಸುಣ್ಣವಾಗಿದೆ ಎಂದರು.

Key words: Rahul Gandhi -advises -Siddaramaiah – Amethi -defeat – Union Minister -Prahlad Joshi.