ಮಾ.26 ರಂದು ನಡೆಯಬೇಕಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ರೋಡ್ ಶೋ ರದ್ದು.

ಬೆಂಗಳೂರು,ಮಾರ್ಚ್,18,2023(www.justkannada.in):  ಮಾರ್ಚ್ 26 ರಂದು ನಿಗದಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ರೋಡ್ ಶೋವನ್ನ ಜೆಡಿಎಸ್ ರದ್ಧುಪಡಿಸಿದೆ.

ಮಾರ್ಚ್ 26 ರಂದು ಕುಂಬಳಗೋಡಿನಿಂದ ಮೈಸೂರಿನವರೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ರೋಡ್ ಶೋ ನಡೆಸಲು ಜೆಡಿಎಸ್ ಮುಂದಾಗಿತ್ತು. ಆದರೆ ಹೆಚ್.ಡಿ ದೇವೇಗೌಡರ ಆರೋಗ್ಯ ದೃಷ್ಠಿಯಿಂದ  ವೈದ್ಯರ ಸಲಹೆ ಮೇರೆಗೆ ರೋಡ್ ಶೋವನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ.

ರೋಡ್ ಶೋ ರದ್ದಾದರೂ ಸಹ ಮೈಸೂರಿನಲ್ಲಿ 10 ಲಕ್ಷ ಕಾರ್ಯಕರ್ತರನ್ನ ಸೇರಿಸಿ ಸಮಾರೋಪ ಸಮಾರಂಭ ನಡೆಸಲು ಜೆಡಿಎಸ್ ತೀರ್ಮಾನಿಸಿದೆ. ರೋಡ್ ಶೋ ರದ್ದು ಕುರಿತು ಇಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಚರ್ಚಿಸಿದ್ದರು.

Key words: Former PM-HD Deve Gowda- road show- March 26 – cancelled.