ಅಪ್ಪು ಕನಸಿನ ‘ಗಂಧದಗುಡಿ’ ಟೀಸರ್ ರಿಲೀಸ್.

ಬೆಂಗಳೂರು,ಡಿಸೆಂಬರ್,6,2021(www.justkannada.in): ಇಂದು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬದಿನದಂದೇ ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಕನಸಿನ ಗಂಧದಗುಡಿ ಟೀಸರ್ ರಿಲೀಸ್ ಮಾಡಲಾಗಿದೆ.

ಅಪ್ಪು ಅವರ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಟೀಸರ್ ರಿಲೀಸ್ ಆಗಿದೆ.  ಪುನೀತ್​ ರಾಜ್​ಕುಮಾರ್​ ಅವರು ‘ಗಂಧದ ಗುಡಿ’ ಡಾಕ್ಯುಮೆಂಟರಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಸ್ವತಃ ತಾವೇ ಕರ್ನಾಟಕ ಸುತ್ತಿ ​ ಡಾಕ್ಯುಮೆಂಟರಿ ಕೆಲಸದಲ್ಲಿ ಭಾಗಿಯಾಗಿದ್ದರು. ಈಗ  ನಟ ಅಪ್ಪು ಕಂಡ ಕನಸು ಅನಾವರಣಗೊಳಿಸಲಾಗಿದೆ. ಇಂದು ‘ಗಂಧದ ಗುಡಿ’ ಟೈಟಲ್ ಟೀಸರ್ ರಿಲೀಸ್​ ಆಗಿದೆ.

ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿದೆ. ಇದಕ್ಕೆ ‘ಗಂಧದ ಗುಡಿ’ ಎಂದು ಹೆಸರಿಡಲಾಗಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. PRK ಆಡಿಯೋ ಯೂಟ್ಯೂಬ್​ ಚಾನೆಲ್ ​ನಲ್ಲಿ ಟೀಸರ್ ರಿಲೀಸ್ ಆಗಿದೆ.

Key words: actor-punith raj kumar- Dream-gandadagudi – Teaser- Release.

ENGLISH SUMMARY…

Appu’s dream documentary ‘Gandhada Gudi’ teaser released
Bengaluru, December 6, 2021 (www.justkannada.in): The teaser of the late sandalwood actor Powerstar Puneeth Rajkumar’s dream project documentary ‘Gandhada Gudi’ was released today, on the occasion of his mother Parvathamma Rajkumar’s birth anniversary.
‘Gandhada Gudi’ is said to be a dream project of the late actor Puneeth. He had a lot of dreams about this documentary, for which he had personally toured extensively across the state. Today the teaser of the movie was released.
Puneeth Rajkumar, in association with Amoghvarsha, who had produced another documentary titled ‘Wild Karnataka’ has produced this documentary ‘Gandhada Gudi’. The film has been shot at several locations across the State, in which Puneeth has also appeared. The teaser is available on PRK audio youtube channel.
Keywords: Puneeth Rajkumar/ Gandhada Gudi/ teaser/ release