Sunday, August 2, 2026

BDA Apartments

Home Front Page ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಕ್ಕೆ ಮಾಜಿ ಸಿಎಂ ಬಿಎಸ್ ವೈ ಖಂಡನೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಕ್ಕೆ ಮಾಜಿ ಸಿಎಂ ಬಿಎಸ್ ವೈ ಖಂಡನೆ.

ಮೈಸೂರು,ಡಿಸೆಂಬರ್,18,2021(www.justkannada.in): ಕನ್ನಡ ಬಾವುಟ ಸುಟ್ಟು ಎಂಇಎಸ್ ಪುಂಡಾಟ ಮೆರೆದ ವಿಚಾರ ಹಾಗೂ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಘಟನೆಯನ್ನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಉದ್ದಟತನ ತೋರಿದ್ದಾರೆ. ಇದನ್ನ ಯಾರು ಸಹಿಸೋದಿಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕು. ಕೂಡಲೆ ಆರೋಪಿಗಳನ್ನ ಬಂಧಿಸಬೇಕು.

ಅದು ಸಂಗೊಳ್ಳಿ ರಾಯಣ್ಣ ಪ್ರತಿಮೆಯಾಗಿರಲಿ ಮತ್ತಾವುದೇ ಮಹನೀಯರ ಪ್ರತಿಮೆಯಾಗಿರಲಿ, ಹಾನಿ ಮಾಡಬಾರದು. ಪ್ರತಿಮೆಗೆ ಹಾನಿಮಾಡಿದವರ ವಿರುದ್ಧ ಕೂಡಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಚಾರವನ್ನ ವಿಧಾನ ಮಂಡಲದಲ್ಲು ಚರ್ಚೆ ಮಾಡುತ್ತೇವೆ ಎಂದು ಬಿಎಸ್ ವೈ ತಿಳಿಸಿದ್ಧಾರೆ.

Key words: Disciplinary -action -e taken -against – damaged – statue – former CM- BS Yeddyurappa