Thursday, August 6, 2026

BDA Apartments

Home Front Page ಬಿಟ್ ಕಾಯಿನ್ ಹಗರಣ ಅವರ ಸುತ್ತಮುತ್ತಲೇ ಇದೆ- ಕಾಂಗ್ರೆಸ್ ವಿರುದ್ಧ ಸಚಿವ ಸುನೀಲ್ ಕುಮಾರ್ ವಾಗ್ದಾಳಿ.

ಬಿಟ್ ಕಾಯಿನ್ ಹಗರಣ ಅವರ ಸುತ್ತಮುತ್ತಲೇ ಇದೆ- ಕಾಂಗ್ರೆಸ್ ವಿರುದ್ಧ ಸಚಿವ ಸುನೀಲ್ ಕುಮಾರ್ ವಾಗ್ದಾಳಿ.

ಬೆಂಗಳೂರು,ನವೆಂಬರ್,13,2021(www.justkannada.in):  ಬಿಟ್ ಕಾಯಿನ್ ದಂಧೆ ವಿಚಾರದಲ್ಲಿ ಕಾಂಗ್ರೆಸ್ ನೂರು ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದೆ. ಬಿಟ್ ಕಾಯಿನ್ ಅವರ ಸುತ್ತಮುತ್ತಲೇ ಇದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ಹಗರಣದ ಬಗ್ಗೆ ದಾಖಲೆಗಳು ಇಲ್ಲ. ಬಿಟ್ ಕಾಯಿನ್ ಅವ್ಯವಹಾರದ ಬಗ್ಗೆ ಸ್ಷಷ್ಟನೆ ನೀಡಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ಬಿಟ್ ಕಾಯಿನ್ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಸುಮ್ಮನೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.

ಶ್ರೀಕಿ ಹ್ಯಾಕ್ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.  ಆಗ ಐಟಿ ಬಿಟಿ ಸಚಿವರು ಯಾರಾಗಿದ್ರು..? ಆಗ ಪ್ರಿಯಾಂಕ್ ಖರ್ಗೆ ಒಂದು ಮಾತು ಆಡಲಿಲ್ಲ. ಈಗ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.  ಹೀಗಾಗಿ  ಹಗರಣ ಅವರ ಸುತ್ತಮುತ್ತಲೇ ಇದೆ ಎಂದು ಸುನೀಲ್ ಕುಮಾರ್ ಟಾಂಗ್ ನೀಡಿದರು.

Key words:  bitcoin- scandal – all around –minister-Sunil Kumar – against- Congress.