Thursday, September 3, 2026

BDA Apartments

Home Front Page ನನಗೆ ಟಾಸ್ಕ್ ಕೊಟ್ಟಿದ್ರು: ಬೆಳಿಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ-ಹೆಚ್ ಡಿಕೆಗೆ ಸಚಿವ ಚಲುವರಾಯಸ್ವಾಮಿ...

ನನಗೆ ಟಾಸ್ಕ್ ಕೊಟ್ಟಿದ್ರು: ಬೆಳಿಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ-ಹೆಚ್ ಡಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ಮಂಡ್ಯ,ಸೆಪ್ಟಂಬರ್,3,2026 (www.justkannada.in): ರಾತ್ರಿ ವೇಳೆ ಯಾರದ್ದೋ ಮನೆ ಬಾಗಿಲು ತಟ್ಟಿರಲಿಲ್ಲ ನಿನ್ನೆ ಪರೋಕ್ಷವಾಗಿ ತಮ್ಮನ್ನು ಟೀಕಿಸಿದ್ದ ಕೇಂದ್ರ ಸಚಿವ ಹೆಚ್ ಡಿ  ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್ ಡಿ ಕುಮಾರಸ್ವಾಮಿ ಯಾವ ಬಾಗಿಲು ತಟ್ಟಿದ್ರು.  ನನ್ನ ಮಗ ಕಾಣಿಸುತ್ತಿಲ್ಲ ಕರೆದುಕೊಂಡು ಬಾ ಎಂದು ಹೆಚ್ ಡಿಡಿ ಟಾಸ್ಕ್ ಕೊಟ್ಟಿದ್ದರು.  ಬೆಳಿಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ ಎಂದು ಟಾಂಗ್ ಕೊಟ್ಟರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಕ್ಕೆ ಕುಮಾರಸ್ವಾಮಿಗೆ ಹೊಟ್ಟೆಯುರಿ ಕುಮಾರಸ್ವಾಮಿ ಸುಮ್ಮನೆ ಬಾಯಿಗೆ ಬಂದಂತೆ ಮಾತಾಡಿದ್ರೆ ಸುಮ್ಮನಿರಲ್ಲ. ಹಿಟ್ ಅಂಡ್ ರನ್ ಮಾಡೋದು ಬೇಡ ದಾಖಲೆ ಸಹಿತ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.

Key words: Itask, knocked, door, Minister, Chaluvarayaswamy, HDK