Wednesday, September 2, 2026

BDA Apartments

Home Front Page ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಮಾನವಿಯತೆ ಮೆರೆದ ಚಿತ್ರ ನಟ ಟೈಗರ್ ನಾಗ್ ಮತ್ತು...

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಮಾನವಿಯತೆ ಮೆರೆದ ಚಿತ್ರ ನಟ ಟೈಗರ್ ನಾಗ್ ಮತ್ತು  ನಯಾಜ್  ತಂಡ…

ತುಮಕೂರು,ಮೇ,13,2021(www.justkannada.in): ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾಮದ ರಂಗನಾಥ್ (35) ಎಂಬ ಯುವಕ  ಕೊರೋನದಿಂದ ಮೃತಪಟ್ಟಿದ್ದು ಶವಸಂಸ್ಕಾರಕ್ಕೆ ಸಂಬಂಧಿಕರು  ಮುಂದೆ ಬಂದಿರಲಿಲ್ಲ. ಹೀಗಾಗಿ ಚಿತ್ರ ನಟ ಟೈಗರ್ ನಾಗ್ ಮತ್ತು ನಯಾಜ್  ತಂಡವರು ಯುವಕನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.jk

ಸಾಮಾಜಿಕ ಕಾರ್ಯಕರ್ತ ಟೈಗರ್ ನಾಗ್.ಜೆಟ್ಟಿಅಗ್ರಹಾರ ನಾಗರಾಜು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಮತ್ತು ಮುಸ್ಲಿಂ ತಂಡದವರು ಸ್ಧಳಕ್ಕೆ ಆಗಮಿಸಿ ಮೃತ ದೇಹವನ್ನು ಶವಸಂಸ್ಕಾರ ಮಾಡಿ ಮಾನವಿಯತೆ ಮೆರೆದಿದ್ದಾರೆ .Tiger Nag -Niaz team - funeral - man - died -corona

ಈ ವೇಳೆಯಲ್ಲಿ ಮಹಮದ್ ಫಾರೂಕ್ .ತಬ್ರೇಜ್ .ಮಹಮದ್.ಗೌಸ್ .ಸುಹೇಲ್ .ವಿಹನ್ .ರೆಹಮಾನ್ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಮಾಡಲು ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಹ ಸಹಾಯಕ್ಕೆ ಬಾರದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂತಹ ಅಧಿಕಾರಿಗಳನ್ನ ಅಮಾನತು ಮಾಡಿ ಎಂದು ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Key words : Tiger Nag -Niaz team – funeral – man – died -corona