Sunday, August 23, 2026

BDA Apartments

Home Front Page ಇನ್ನೆರೆಡು ದಿನ ಕಾಯಿರಿ ಅಮೇಲೆ ದಾಖಲೆ ಬಿಡುಗಡೆ ಮಾಡುವೆ- ಕಾಂಗ್ರೆಸ್ ವಿರುದ್ಧ ಸಚಿವ ಗೋವಿಂದ ಕಾರಜೋಳ...

ಇನ್ನೆರೆಡು ದಿನ ಕಾಯಿರಿ ಅಮೇಲೆ ದಾಖಲೆ ಬಿಡುಗಡೆ ಮಾಡುವೆ- ಕಾಂಗ್ರೆಸ್ ವಿರುದ್ಧ ಸಚಿವ ಗೋವಿಂದ ಕಾರಜೋಳ ಗುಡುಗು

ಬೆಂಗಳೂರು,ಜನವರಿ,4,2022(www.justkannada.in): ಕಾಂಗ್ರೆಸ್ ನವರು ಮೈ ಮೇಲೆ ದೆವ್ವ ಬಂದಂತೆ ಆಡುತ್ತಿದ್ದಾರೆ.  ಮೇಕೆದಾಟು ಯೋಜನೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದೆ. ಇನ್ನೆರೆಡು ದಿನ ಕಾಯಿರಿ ಅಮೇಲೆ ದಾಖಲೆ ಬಿಡುಗಡೆ ಮಾಡುವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಬುಟ್ಟಿಯಲ್ಲಿ ಹಾವಿದೆ ಎಂದಿದ್ದೆ ಅದರೆ ಯಾವ ಹಾವು ಅಂದಿದ್ನಾ…? ಕಾಂಗ್ರೆಸ್ ನವರು ಯಾಕೆ ಮೈಮೇಲೆ ಚೇಳು ಬಿಟ್ಟುಕೊಂಡವರಂತೆ ಆಡುತ್ತಿದ್ದಾರೆ. ಇನ್ನೆರೆಡು ದಿನ ಕಾಯಿರಿ ದಾಖಲೆ ಬಿಡುಗಡೆ ಮಾಡುವೆ ಎಂದರು.

ಮೇಕೆದಾಟು ಯೋಜನೆ 9 ಸಾವಿರ ಕೋಟಿಗೆ ಡಿಪಿಆರ್ ಆಗಿದೆ. ಕುಡಿಯುವ ನೀರು ವಿದ್ಯುತ್ ಉತ್ಪಾದನೆಗಾಗಿ ಮೇಕೆದಾಟು ಯೋಜನೆ ಜಾರಿ ಮಾಡಲಾಗುತ್ತಿದೆ.  ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಗೆ ಹೋಗಿದೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಒಂದು ಪ್ರಶ್ನೆ.  ಬಿಜೆಪಿ ನಾಯಕ ಅಣ್ಣಾಮಲೈನತ್ತ  ಬೊಟ್ಟು ಮಾಡುತ್ತೀರಲ್ಲಾ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜತೆ ನೀವು ಚೆನ್ನಾಗಿದ್ದೀರಿ ಸ್ಟಾಲಿನ್ ಗೆ ಹೇಳಿಸಿ ಕ್ಲಿಯರ್ ಮಾಡಿಸಿ ಎಂದು ಸವಾಲು ಹಾಕಿದರು.

Key words: Wait – two days – release- record – Congress –minister-govind karjol