Thursday, August 13, 2026

BDA Apartments

Home Front Page ಇಂಧನ ಮಿತ ಬಳಕೆಗೆ ಪ್ರಧಾನಿ ಮೋದಿ ಮನವಿ ಸಮರ್ಥಿಸಿಕೊಂಡ ಹೆಚ್ ಡಿ ದೇವೇಗೌಡರು.

ಇಂಧನ ಮಿತ ಬಳಕೆಗೆ ಪ್ರಧಾನಿ ಮೋದಿ ಮನವಿ ಸಮರ್ಥಿಸಿಕೊಂಡ ಹೆಚ್ ಡಿ ದೇವೇಗೌಡರು.

ಬೆಂಗಳೂರು,ಮೇ,11,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಇಂಧನ ಮಿತ ಬಳಕೆ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ಮೋದಿ ಮಾಡಿದ ಮನವಿಯನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ದೇವೇಗೌಡರು, ಮಧ್ಯಪ್ರಾಚ್ಯದಲ್ಲಿ ಯುದ್ದದಿಂದ ದುಷ್ಪರಿಣಾಮ ಆಗಿದೆ ಹಾಗಾಗಿ ಎಚ್ಚರಿಕೆಯಿಂದ ಬಳಕೆ ಮಾಡಿ ಅಂತಾ  ಪ್ರಧಾನಿ ಮೋದಿ ಹೇಳಿದ್ದಾರೆ.   ದೇಶದ 150 ಕೋಟಿ ಜನರಿಗೆ ಮೋದಿ ಮನವಿ ಮಾಡಿದ್ದಾರೆ  ಎಂದರು.

ಅಂತರಾಷ್ಟ್ರೀಯ  ಮಟ್ಟದ ಸಂಘರ್ಷದಿಂದ ಆಗುರಿವ ದುಷ್ಪರಿಣಾಮವಿದು. ಹೀಗಾಗಿ  ಮೋದಿ ಮನವಿಯನ್ನು ಸ್ವಾಗತ ಮಾಡಬೇಕು ಎಂದು  ,ಆಜಿಪ್ರದಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.

Key words: HD Deve Gowda, defends ,PM Modi, appeal