Sunday, September 20, 2026

BDA Apartments

ಈ ವೀಕೆಂಡ್ ನಲ್ಲಿ ರಮೇಶ್ ಜತೆ ಸುಮಲತಾ, ನಾಗಾಭರಣ ! BDA JK_Adv BDA Adv
Home Cinema ಈ ವೀಕೆಂಡ್ ನಲ್ಲಿ ರಮೇಶ್ ಜತೆ ಸುಮಲತಾ, ನಾಗಾಭರಣ !

ಈ ವೀಕೆಂಡ್ ನಲ್ಲಿ ರಮೇಶ್ ಜತೆ ಸುಮಲತಾ, ನಾಗಾಭರಣ !

ಬೆಂಗಳೂರು, ಜೂನ್ 06, 2019 (www.justkannada.in): ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಮತ್ತು ಭಾನುವಾರ ನಿರ್ದೇಶಕ ನಾಗಾಭರಣ ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ.

ನಾಗಾಭರಣ ಅವರು ರಂಗಭೂಮಿಯಲ್ಲೂ ಕೆಲಸ ಮಾಡಿದವರು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು. ಹೀಗಾಗಿ ಅವರನ್ನು ಸಾಧಕರ ಸೀಟ್ ಗೆ ಅವರನ್ನು ಕರೆತಂದಿದ್ದಕ್ಕೆ ವೀಕ್ಷಕರಿಗೆ ತಕರಾರು ಇಲ್ಲ.

ಆದರೆ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾರನ್ನು ಕರೆತಂದಿದ್ದಕ್ಕೆ ವೀಕ್ಷಕರು ತಗಾದೆ ತೆಗೆದಿದ್ದಾರೆ. ಕೇವಲ ಚಿತ್ರ ನಟಿ, ಅಂಬರೀಶ್ ಪತ್ನಿ ಎನ್ನುವುದನ್ನು ಹೊರತುಪಡಿಸಿದರೆ ಸುಮಲತಾ ಸಾಧನೆ ಏನು ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.

ಕೇವಲ ಚಿತ್ರನಟರನ್ನೇ ಕರೆತರುವುದಕ್ಕೂ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.