ಬೆಳಗಾವಿ,ಮಾರ್ಚ್,16,2023(www.justkannada.in): ಮಾರ್ಚ್ 20 ರಂದು ಬೆಳಗಾವಿಯಲ್ಲಿ ಯುವಕ್ರಾಂತಿ ರ್ಯಾಲಿ ನಡೆಸುತ್ತೇವೆ. ಅಂದು ಯುವಕರಿಗೆ ಯೋಜನೆ ಘೋಷಣೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.![]()
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಮಾರ್ಚ್ 20ರ ಯುವಕ್ರಾಂತಿ ರ್ಯಾಲಿಯನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಪಾಲ್ಗೊಳ್ಳಲಿದ್ದಾರೆ. ಬೊಮ್ಮಯಿ ಸರ್ಕಾರ ಯುವಕರ ಭವಿಷ್ಯವನ್ನ ಹಾಳು ಮಾಡಿದೆ. ಪಿಎಸ್ ಐ ಹುದ್ದೆ ಸೇರಿದಂತೆ ಸರ್ಕಾರಿ ಹುದ್ದೆಯನ್ನ ಮಾರಾಟ ಮಾಡಿದ್ದಾರೆ. ಕೈಗಾರಿಕೋದ್ಯಮಗಳು ಅನ್ಯರಾಜ್ಯಗಳ ಪಾಲಾಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ರೋಡ್ ಶೋ ಮಾಡದಿದ್ದರೇ ಒಳ್ಳೆಯದು . ಮೋದಿ ರೋಡ್ ಶೋ ಮಾಡಿದ ದಿನವೇ ಬೆಲೆ ಏರಿಕೆ ಆಗಿದೆ. ಹೀಗಾಗಿ ಮೋದಿ ರೋಡ್ ಶೋ ಮಾಡದಿದ್ದರೇ ಒಳ್ಳೆಯದಾಗುತ್ತದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದರು.
Key words: Yuva Kranti -rally – Belgaum – March 20- Randeep Singh Surjewala.






