ಚಲಿಸುತ್ತಿದ್ದ ಕಾರು ಹಳ್ಳಕ್ಕೆ ಬಿದ್ದು ದಂಪತಿ ದುರ್ಮರಣ.

ಕೋಲಾರ,ಮಾರ್ಚ್,17,2023(www.justkannada.in): ಚಲಿಸುತ್ತಿದ್ದ ಕಾರು ಹಳ್ಳಕ್ಕೆ ಬಿದ್ದು ದಂಪತಿ ದುರ್ಮರಣಕ್ಕೀಡಾಗಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿದೆ.

ಶ್ರೀನಿವಾಸಪುರದ ಲಕ್ಷ್ಮೀಪುರ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಆಂಧ್ರ ಮೂಲದ  ಶಫಿ(55), ಶಮಾ(50) ಮೃತಪಟ್ಟವರು. ಕೆಂಪೇಗೌಡ ಏರ್ ಪೋರ್ಟ್ ನಿಂದ ಮದನಪಲ್ಲಿಗೆ ತೆರಳುತ್ತಿದ್ದ ಕಾರು ಲಕ್ಷ್ಮೀಪುರ ಕ್ರಾಸ್ ಬಳಿ 20ರಿಂದ 25 ಅಡಿ ಹಳ್ಳಕ್ಕೆ ಬಿದ್ದಿದೆ. ಏರ್ ಪೋರ್ಟ್ ನಲ್ಲಿ ಮಗಳನ್ನ  ಬಿಟ್ಟು ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ.

ಅಪಘಾತ ಸ್ಥಳಕ್ಕೆ ಗೌನಿಪಲ್ಲಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಶ್ರೀನಿವಾಸಪುರ ಆಸ್ಪತ್ರೆಗೆ ರವಾನಿಸಲಾಗಿದೆ.

Key words: moving-car- fell – ditch – couple- died.