ಇಂದಿನಿಂದ ಯುವ ದಸರಾ ಜೋಶ್: ಮೊದಲ ದಿನ ಅಪ್ಪುಗೆ ಗಾಯನ ನಮನ !

ಮೈಸೂರು, ಸೆಪ್ಟೆಂಬರ್ 28, 2022 (www.justkannada.in): ‘ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಇಂದಿನಿಂದ  ಆರಂಭಗೊಳ್ಳುತ್ತಿದೆ.

ಉದ್ಘಾಟನಾ ಸಮಾರಂಭ ಇಂದು ಸಂಜೆ 6ರಿಂದ 7ಗಂಟೆಯವರೆಗೆ ನಡೆಯಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಇಂದು ‘ಅಪ್ಪು ನಮನ’ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ.

ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪ್ಪು ಅವರ ಅಭಿಮಾನಿ, ನಿರೂಪಕಿ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಹಾಡುಗಳನ್ನು ಹಾಡಲಿದ್ದಾರೆ.