ತಮಿಳು ನಟ ವಿಶಾಲ್ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ

ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in): ತಮಿಳು ನಟ ವಿಶಾಲ್ ಅವರ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆದಿದೆ.

ವಿಶಾಲ್ ಅವರು ತಮ್ಮ ಕುಟುಂಬದೊಂದಿಗೆ ಚೆನ್ನೈನ ಅಣ್ಣಾನಗರ 12ನೇ ಬೀದಿಯಲ್ಲಿ ವಾಸವಾಗಿದ್ದಾರೆ. ರಾತ್ರಿ ವೇಳೆ ಳಿ ಕಾರಿನಲ್ಲಿ ಬಂದ ಕೆಲ ಅಪರಿಚಿತ ವ್ಯಕ್ತಿಗಳು ಮನೆಗೆ ಕಲ್ಲು ಎಸೆದಿದ್ದು, ಮನೆಯ ಕಿಟಕಿ ಗಾಜುಗಳು ಒಡೆದಿವೆ.

ಘಟನೆ ಬಳಿಕ ವಿಶಾಲ್ ಪರವಾಗಿ ಅವರ ಮ್ಯಾನೇಜರ್ ಹರಿ ಕೃಷ್ಣನ್ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಂಪು ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು ವಿಶಾಲ್ ಅವರ ಮನೆಯ ಮೇಲೆ ಕಲ್ಲಿನ ದಾಳಿ ನಡೆಸಿದ್ದಾರೆ. ಸಿಸಿಟಿವಿ ವಿಡಿಯೋದಲ್ಲಿ ಇದು ದಾಖಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.