ಮೈಸೂರಿನಲ್ಲಿ ಇಂದು  1219 ಹೊಸ ಕೊರೋನಾ ಪ್ರಕರಣ ಪತ್ತೆ…

ಮೈಸೂರು,ಏಪ್ರಿಲ್,29,2021(www.justkannada.in):  ರಾಜ್ಯದಲ್ಲಿ ಕೊರೋನಾ  ಮಹಾಮಾರಿ ಆರ್ಭಟ ಜೋರಾಗಿದ್ದು ಈ ಮಧ್ಯೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 1219 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರು ಇಂದು ಕೊರೊನಾ ಸೋಂಕಿತರು ಮರಣ ಮೃದಂಗ ಮುಂದುವರಿದಿದ್ದು ಇಂದು  12 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 21 ದಿನದಲ್ಲಿ  122 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಹೊಸದಾಗಿ 1219ಮಂದಿಗೆ ಸೋಂಕು ಕಾಣಿಸಿಕೊಂಡಿದೆ.ysore-detects-1219-new-corona-cases-today

ಇಂದು ಗುಣಮುಖರಾದವರ ಸಂಖ್ಯೆ  955. ಹಾಗೆಯೇ ಒಟ್ಟು ಗುಣಮುಖರಾದವರ ಸಂಖ್ಯೆ 63717. ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 73275 ಮಂದಿ ಇದ್ದಾರೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8366., ಜಿಲ್ಲೆಯಲ್ಲಿ ಕೊರೊನಾದಿಂದ ಒಟ್ಟು  1192 ಮಂದಿ ಸಾವನ್ನಪ್ಪಿದ್ದಾರೆ.

Key words: Mysore -detects -1219 -new Corona -cases today