ಪಿಎಂಜಿಕೆಎವೈ ಅಡಿ ಕಾರ್ಡ್ ದಾರರಿಗೆ ತಲಾ 5 ಕೆ.ಜಿ ಅಕ್ಕಿ ಉಚಿತ ವಿತರಣೆ….

ಬೆಂಗಳೂರು,ಏಪ್ರಿಲ್,29,2021 (www.justkannada.in):   ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕ ಹರಡಿರುವ ಕಾರಣಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿ 2021ರ ಮೇ ಮತ್ತು ಜೂನ್ ತಿಂಗಳಿಗೆ ನಾಲ್ಕು ಕೋಟಿ ಟಿಪಿಡಿಎಸ್ ಕಾರ್ಡ್ ಹೊಂದಿರುವ ಸದಸ್ಯರಿಗೆ ತಿಂಗಳಿಗೆ ತಲಾ ಐದು ಕೆ.ಜಿ.ಅಕ್ಕಿ ಯನ್ನು ಉಚಿತವಾಗಿ ನೀಡಲಿದೆ.jk

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಉಚಿತ ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡನ್ ಗಳಿಂದ ಪಡೆದುಕೊಳ್ಳುವುದನ್ನು ಆರಂಭಿಸಿದೆ.

ರಾಷ್ಟ್ರೀಯ ಆಹಾರ ಭಧ್ರತಾ ಕಾಯ್ದೆ    (ಎನ್ಎಫ್ಎಸ್ಎ )ಅಡಿ  ಈಗಾಗಲೇ ನಿಗದಿತವಾಗಿ ಮಾಮೂಲಿನಂತೆ ನೀಡುತ್ತಿದ್ದ ಆಹಾರ ಧಾನ್ಯಕ್ಕಿಂತ ಹೆಚ್ಚುವರಿಯಾಗಿ 401930 ಟನ್ ಅಕ್ಕಿಯನ್ನು ಭಾರತೀಯ ಆಹಾರ ನಿಗಮ ಉಚಿತವಾಗಿ ಕರ್ನಾಟಕ ಸರ್ಕಾರಕ್ಕೆ ನೀಡುತ್ತಿದೆ.

Key words: Free- distribution – 5 kg – rice – PMGKAY – card holders