ಆಸಿಸ್-ಭಾರತ ಪಂದ್ಯದಲ್ಲಿ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡಿದ್ದು ಬೆಂಗಳೂರು ಯುವಕ !

ಬೆಂಗಳೂರು, ಡಿಸೆಂಬರ್ 01, 2020 (www.justkannada.in):  ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುವ ವೇಳೆಯಲ್ಲಿ ನಡೆದ ಪ್ರೇಮ ನಿವೇದನೆ ಮಾಡಿದ್ದ ಯುವಕ ಬೆಂಗಳೂರಿನವ!

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾ ಯುವತಿಗೆ ಭಾರತೀಯ ಯುವಕ ಲವ್ ಪ್ರಪೋಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅಂದಹಾಗೆ ಆ ಯುವತಿಗೆ ಪ್ರಪೋಸ್ ಮಾಡಿದ್ದ ಬೆಂಗಳೂರಿನ ಹುಡುಗ ದೀಪೆನ್ ಮಾಂಡಲಿಯಾ.

ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಪಡೆದು ಮೆಲ್ಬರ್ನ್ ನಲ್ಲಿ ಜೆಟ್ ಸ್ಟಾರ್ ಆಸ್ಟ್ರೇಲಿಯಾ ಕಂಪನಿಯ ಪ್ರಾಜೆಕ್ಟ್ ಅಂಡ್ ರಿಪೋರ್ಟಿಂಗ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಯುವತಿ ರೋಸ್ ವಿಂಬುಷ್ ಅವರು ಡೀಪೆನ್ ಗೆ ಪರಿಚಿತರಾಗಿದ್ದು, ಇಬ್ಬರ ನಡುವೆ ಆತ್ಮೀಯತೆ ಇದೆ. ಹೀಗಾಗಿಯೇ ಆಸ್ಟ್ರೇಲಿಯಾ-ಭಾರತ ಪಂದ್ಯ ನಡೆಯುವ ಸಂದರ್ಭದಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ.