ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡಿದ್ಧ ಚಿರತೆ ಬೋನಿಗೆ…

ಮೈಸೂರು,ಡಿಸೆಂಬರ್,1,2020(www.justkannada.in):  ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡಿದ್ಧ  ಚಿರತೆ ಬೋನಿಗೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ಧ ಬೋನಿಗೆ ಬಿದ್ಧಿದೆ.logo-justkannada-mysore

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಚಿಕ್ಕಾಡನಹಳ್ಳಿ ಗ್ರಾಮದಲ್ಲಿ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಸಾಕು ಪ್ರಾಣಿಗಳ ಮೇಲೆ ಈ ಚಿರತೆ ದಾಳಿ ನಡೆಸಿ ಕಾಟ ನೀಡಿತ್ತು. ಚಿರತೆ ದಾಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು.mysore-leopard-bone-forest-villager

ನಂತರ ಗ್ರಾಮದ ರೈತ ಚಂದ್ರಶೇಖರ್ ಜಮೀನಿನಲ್ಲಿ ಅರಣ್ಯ ಇಲಾಖೆ ವತಿಯಿಂದ  ಬೋನು ಇರಿಸಲಾಗಿತ್ತು. ಇದೀಗ ಹೆಣ್ಣು ಚಿರತೆ ಬೋನಿಗೆ ಬಿದ್ದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಮತ್ತೆ ನಾಗರಹೊಳೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಇನ್ನು ಗ್ರಾಮದ ಸುತ್ತ ಮುತ್ತ ಸಾಕಷ್ಟು ಚಿರತೆಗಳು ಇರುವ ಆತಂಕ ಎದುರಾಗಿದ್ದು ಮತ್ತೆ ಬೋನು ಇರಿಸುವಂತೆ ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Key words: mysore- leopard –Bone- forest-villager