ನಿಮಗೆ ಒಂದು ಇರಿತಕ್ಕೆ ನೋವಾಯಿತು ಎನ್ನುತ್ತಿರಲ್ಲಾ. ನಮಗೆ ಎಷ್ಟು ನೋವಾಗಿರಬೇಡ : ಸಿದ್ದರಾಮಯ್ಯಗೆ ಎಚ್.‌ವಿಶ್ವನಾಥ್ ತಿರುಗೇಟು

ಮೈಸೂರು,ಡಿಸೆಂಬರ್,19,2020(www.justkannada.in) : ನಮ್ಮದು ಮೂಳೆ ಮಾಂಸದ ದೇಹವೇ, ನಿಮಗೆ ಒಂದು ಇರಿತಕ್ಕೆ ನೋವಾಯಿತು ಎನ್ನುತ್ತಿರಲ್ಲಾ. ನಮಗೆ ಎಷ್ಟು ನೋವಾಗಿರಬೇಡ. ನಿಮಗೆ ಉಪಕಾರ ಸ್ಮರಣೆಯೇ ಇಲ್ಲ. ನಿಮ್ಮ ಸೋಲಿಗೆ ನೀವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ್ ತಿರುಗೇಟು ನೀಡಿದ್ದಾರೆ.Teachers,solve,problems,Government,bound,Minister,R.Ashok

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರೇ ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು ಎಂಬ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಎಚ್.‌ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಸದಾ ಬೇರೊಬ್ಬರ ಬೆನ್ನಿಗೆ ಇರಿಯುತ್ತಾ ಬಂದಿದ್ದವರ ಬೆನ್ನಿಗೇ ಇರಿದಾಗ ಇರಿತದ ನೋವು ಏನೆಂಬುದು ಗೊತ್ತಾಗಿದೆ. ಯಾರು ನಿಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದಿದ್ದರೋ ಅವರನ್ನೇ ನೀವು ಪಕ್ಚದಿಂದ ಹೊರಹೋಗುವಂತೆ ಮಾಡಿದ್ರೀ. ಆಗ ನಮಗೆ ಆದ ಇರಿತದ ನೋವು, ಈಗ ನಿಮಗೆ ಅರ್ಥವಾಗಿದೆ ಎಂದು

ದರ್ಪ, ದುರಾಂಹಕಾರ, ಅಹಂ ಸೋಲಿಗೆ ಕಾರಣ

You-stab-All-rights-reserved-How-many-Don't- worry-Siddaramaiah-H.Vishwanath-Against

ನಿಮ್ಮ ಸೋಲಿಗೆ ನಿಮ್ಮ ದರ್ಪ, ನಿಮ್ಮ ದುರಾಂಹಕಾರ, ನಾನು ನಾನು ಎಂಬ ಅಹಂ, ಹಿರಿಯ ನಾಯಕರಿಗೆ ಬೆಲೆ ಕೊಡದೇ ಏಕ  ವಚನದಲ್ಲಿ ಮಾತನಾಡಿದ್ದು, ವೀರಶೈವ ಲಿಂಗಾಯತ ಸಮಾಜವನ್ನು ಹೊಡೆಯಲು ಮುಂದಾಗಿದ್ದು…ಸೇರಿದಂತೆ ಇನ್ನೂ ಹಲವಾರು ಕಾರಣಗಳಿಂದ ನಿಮಗೆ ಸೋಲುಂಟಾಯಿತು ಎಂದು ವಾಗ್ದಾಳಿ ನಡೆಸಿದರು.

key words : You-stab-All-rights-reserved-How-many-Don’t- worry-Siddaramaiah-H.Vishwanath-Against