Thursday, August 13, 2026

BDA Apartments

Home Front Page “ನಿಮ್ಮ ಕಣ್ಣು, ಕಿವಿ, ನಾಲಿಗೆಗಳನ್ನು ಪರೀಕ್ಷೆಗೊಳಪಡಿಸಿ” : ರಾಜ್ಯ ಕಾಂಗ್ರೆಸ್ ಟ್ವೀಟ್

“ನಿಮ್ಮ ಕಣ್ಣು, ಕಿವಿ, ನಾಲಿಗೆಗಳನ್ನು ಪರೀಕ್ಷೆಗೊಳಪಡಿಸಿ” : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,24,2021(www.justkannada.in) : ಬಿಜೆಪಿ ಸಿದ್ಧಾಂತದ ಪ್ರಕಾರ ಅಸಹಾಯಕ ಹೆಣ್ಣುಮಗಳೊಬ್ಬಳಿಗೆ ಉದ್ಯೋಗ ನೀಡುವ ಆಮಿಷ ತೋರಿ ಬಳಸಿಕೊಂಡವನು ಮಹಾನಾಯಕ. ನೊಂದವರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸುವವರು ಸಂಚುಕೋರರು. ನಿಮ್ಮ ಕಣ್ಣು, ಕಿವಿ, ನಾಲಿಗೆಗಳನ್ನು ಪರೀಕ್ಷೆಗೊಳಪಡಿಸಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದೆ.

Your-eyes-ears-tongues-Test-State-Congress-tweet

ಅಭಿವೃದ್ಧಿ ಮಾಡಿ ಎಂದರೆ ಲಂಚ ಕೊಡಿ ಎನ್ನುವರು. ಉದ್ಯೋಗ ಕೊಡಿ ಎಂದರೆ ಮಂಚ ಹತ್ತಿ ಎನ್ನವರು. ಕಾರ್ಮಿಕರ ಪರ ನಿಲ್ಲಿ ಎಂದರೆ ಕಾಮುಕರ ಪರ ನಿಲ್ಲುವರು  ನೆರೆ ಪರಿಹಾರ ಕೊಡಿ ಎಂದರೆ ರಾಸ್ಕಲ್ ಎನ್ನುವರು. ರೈತರ ಸಾಲ ಮನ್ನಾ ಮಾಡಿ ಎಂದರೆ ನೋಟ್ ಪ್ರಿಂಟಿಂಗ್ ಮಷಿನ್ ಇಟ್ಟಿಲ್ಲ ಎನ್ನುವರು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.

Your-eyes-ears-tongues-Test-State-Congress-tweet

ರೈತರ ಕಷ್ಟ ಬಗೆಹರಿಸಿ ಎಂದರೆ “ಅವರು ಹೇಡಿಗಳು” ಎನ್ನುವರು.ಭ್ರಷ್ಟಾಚಾರ ನಿಲ್ಲಿಸಿ ಎಂದರೆ “ಅದೆಲ್ಲ ಕಾಮನ್ ಬಿಡಿ”ಎನ್ನುವರು. ಅಕ್ರಮ ಗಣಿಗಾರಿಕೆ ನಿಲ್ಲಿಸಿ ಎಂದರೆ “ನಾವೆನ್ ಮಾಡಕ್ಕಾಗತ್ತೆ”, GST ಬಾಕಿ ತನ್ನಿ ಎಂದರೆ ಸಾಲ ಮಾಡ್ತೀವಿ ಎನ್ನುತ್ತಾರೆ. ಬಜೆಟ್‌ನಲ್ಲಿ ಏನಿದೆ ಕೇಳಿದರೆ ತೆರಿಗೆ ಹಾಕಿಲ್ಲ ಎನ್ನುತ್ತಾರೆ ಎಂದು ಕಿಡಿಕಾರಿದೆ.

key words : Your-eyes-ears-tongues-Test-State-Congress-tweet