ಅನ್ಯಕೋಮಿನ ಯುವತಿ ಪ್ರೀತಿಸಿದ ಯುವಕನ ಬರ್ಬರ ಹತ್ಯೆ.

ವಿಜಯಪುರ,ಅಕ್ಟೋಬರ್,23,2021(www.justkannada.in):  ಪ್ರೇಯಸಿಯ ಎದುರೇ ಪ್ರಿಯಕರನನ್ನ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಅಲಮೇಲ ತಾಲ್ಲೂಕಿನ ಬಳಿಗನೂರು ಗ್ರಾಮದಲ್ಲಿ ನಡೆದಿದೆ. ರವಿ ನಿಂಬರಗಿ(32) ಹತ್ಯೆಯಾದ ಯುವಕ. ಈತ ಅನ್ಯಕೋಮಿನ ಯುವತಿಯನ್ನ ಪ್ರೀತಿಸಿದ್ಧ. ಈ ವಿಚಾರ ಯುವತಿಯ ಮನೆಯವರಿಗೆ ತಿಳಿದಿದ್ದು ಯುವತಿಯ ಪೋಷಕರು ರವಿನಿಂಬರಗಿಗೆ ವಾರ್ನಿಂಗ್ ನೀಡಿದ್ದರು.

ಈ ಮಧ್ಯೆ ಪ್ರೀತಿ ಮುಂದುವರೆಸಿದ ಹಿನ್ನಲೆ ಯುವತಿಯ ಮನೆಯವರೇ ರವಿನಿಂಬರಗಿಯನ್ನ ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 8 ಜನರ ತಂಡದಿಂದ ಈ ಹತ್ಯೆ ನಡೆದಿದ್ದು, ಕೊಲೆ ಮಾಡಿ  ಶವದ ಸಮೇತ 8 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ವಿಚಾರವನ್ನ ಯುವತಿಯೇ ರವಿನಿಂಬರಗಿಯ ಮನೆಗೆ ತಿಳಿಸಿದ್ದು ನಂತರ ಅಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎನ್ನಲಾಗಿದೆ. ಯುವಕನ ಪೋಷಕರೂ ಸಹ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Key words: Young Man –murder-Love-  girl-vijaypur