ದೇಶದಲ್ಲಿ ಒಂದೇ ದಿನ ಹೊಸದಾಗಿ 16,326 ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಅಕ್ಟೋಬರ್,23,2021(www.justkannada.in): ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿದ್ದು ಇದೀಗ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 16,326 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 666 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಈವರೆಗಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,41,59,562ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಈಗ 1,73,728 ಸಕ್ರಿಯ ಪ್ರಕರಣಗಳಿವೆ.  ಹೊಸ ಕೋವಿಡ್ ಪ್ರಕರಣಗಳ ದೈನಂದಿನ ಹೆಚ್ಚಳವು ಸತತ 29 ದಿನಗಳಿಂದ 30,000ಕ್ಕಿಂತ ಕಡಿಮೆ ಇದೆ ಮತ್ತು ಸತತ 118 ದಿನಗಳಿಂದ 50,000 ಕ್ಕಿಂತ ಕಡಿಮೆ ಇದೆ.

ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇಕಡಾ 0.51ಕ್ಕೆ ಇಳಿದಿದ್ದು, ಮಾರ್ಚ್ 2020ರ ನಂತರದ ಕಡಿಮೆ ಮಟ್ಟದ್ದಾಗಿದೆ. ಕೋವಿಡ್-19 ರಾಷ್ಟ್ರೀಯ ಚೇತರಿಕೆ ದರವು ಶೇಕಡಾ 98.16 ರಷ್ಟಿದೆ ಎಂದು ಆರೋಗ್ಯ  ಇಲಾಖೆ ತಿಳಿಸಿದೆ.

Key words: 16,326- new cases –Covid- detected – one day

ENGLISH SUMMARY…

16,326 new COVID-19 Pandemic cases reported in the last 24 hours in the country
New Delhi, October 23, 2021 (www.justkannada.in): The COVID-19 Pandemic is reducing in the country. 16,326 new cases have been reported in the last 24 hours.
According to the information provided by the Union Health Ministry, 666 people have lost their lives in the last 24 hours in the country. The total number of infected persons has increased to 3,41,59,562, and there are 1,73,728 active cases. The number of daily new cases has remained below 30,000 from the last 29 days and below 50,000 in 118 days.
The positivity rate is 0.51% which is the lowest post-March 2020. The percentage of recovery is 98.16%.
Keywords: COVID-19 Pandemic/ Corona cases/country/ reducing