Sunday, September 20, 2026

BDA Apartments

ಬೆಂಗಳೂರಿನಲ್ಲಿ ಡೆಂಗ್ಯೂಗೆ ಯುವಕ ಬಲಿ BDA JK_Adv BDA Adv
Home Front Page ಬೆಂಗಳೂರಿನಲ್ಲಿ ಡೆಂಗ್ಯೂಗೆ ಯುವಕ ಬಲಿ

ಬೆಂಗಳೂರಿನಲ್ಲಿ ಡೆಂಗ್ಯೂಗೆ ಯುವಕ ಬಲಿ

ಬೆಂಗಳೂರು,ಜುಲೈ,1,2023 (www.justkannada.in): ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂಗೆ ಯುವಕ ಬಲಿಯಾಗಿದ್ದಾನೆ.

ಬೆಂಗಳೂರಿನ ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾನೆ ಎಂದು ಬಿಬಿಎಂಪಿ ದೃಢಪಡಿಸಿದೆ. ಶುಕ್ರವಾರ  ಡೆಂಗ್ಯೂ ಜ್ವರಕ್ಕೆ ಇಬ್ಬರು ಮೃತಪಟ್ಟಿದ್ದು, ಇದೀಗ ಮತ್ತೆ ಡೆಂಗ್ಯೂಗೆ ಯುವಕ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.ಬೆಂಗಳೂರಿನಲ್ಲಿ ಡೆಂಗ್ಯೂಗೆ ಯುವಕ ಬಲಿ dengue

ಕಳೆದ 6 ತಿಂಗಳಲ್ಲಿ 2457 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಆತಂಕ ಮೂಡಿಸಿದೆ.

Key words: young man, death, dengue, Bangalore