ಮೈಸೂರು ಅರಮನೆ ಮುಂಭಾಗ ಪ್ರಧಾನಿ ಮೋದಿ ಅವರ ಯೋಗ ಕಾರ್ಯಕ್ರಮ ನಿಗದಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಮೈಸೂರು,ಮೇ,30,2022(www.justkannada.in): ಮೈಸೂರು ಅರಮನೆ ಮುಂಭಾಗ ಪ್ರಧಾನಿ ಮೋದಿ ಅವರ ಯೋಗ ಕಾರ್ಯಕ್ರಮ ನಿಗದಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಮೈಸೂರಿಗೆ ಜೂನ್ 21ರಂದು ಮೋದಿ ಆಗಮನ ವಿಚಾರ‌ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾರ್ಯಕ್ರಮ ಸಂಬಂಧ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. ಅರಮನೆ ಮುಂಭಾಗ ಮೋದಿ ಅವರ ಯೋಗ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಅಗಮನ ಮೈಸೂರಿಗೆ ಮಾತ್ರ ಅಲ್ಲಾ ಇಡೀ ರಾಜ್ಯಕ್ಕೆ ಸಂತಸ ಮತ್ತು ಹೆಮ್ಮೆ ತರುತ್ತಿದೆ. ಅಂದು ಒಂದು ದಿನ ಮಾತ್ರ ಮೋದಿ ಅವರ ಜೊತೆ ಯೋಗ ಮಾಡುವುದಲ್ಲ, ಅಂದಿನಿಂದ ಪ್ರತಿದಿನ ಎಲ್ಲರೂ ಯೋಗ ಮಾಡುವುದಕ್ಕೆ ಪ್ರಾರಂಭಿಸಬೇಕು. ಮೋದಿ ಅವರ ಆಗಮನ ಯೋಗ ಆರಂಭಿಸಲು ಎಲ್ಲರಿಗೂ ಪ್ರೇರಪಣೆಯಾಗಲಿ ಎಂದರು.

ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ.ಮುಂದಿನ ದಿ‌ನಗಳ ದೃಷ್ಟಿಯಿಂದಲೂ ಕಲ್ಲಿದ್ದಲೂ ಸಂಗ್ರಹ ಮಾಡಿಕೊಳ್ಳುತ್ತಿದ್ದೇವೆ. ಯಾವ ಸಮಸ್ಯೆ ಉದ್ಬವವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

Key words: yoga day-june 21-mysore-PM-modi-central minister-prahalad joshi