ರಾಷ್ಟ್ರಮಟ್ಟದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತೇನೆ- ರಾಜ್ಯಸಭಾ ಟಿಕೆಟ್ ಸಿಕ್ಕಿದ್ದಕ್ಕೆ ನಟ ಜಗ್ಗೇಶ್ ಸಂತಸ.

ಬೆಂಗಳೂರು,ಮೇ,30,2022(www.justkannada.in): ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಟ ಜಗ್ಗೇಶ್  ಹೆಸರನ್ನು ನಿನ್ನೆ ಘೋಷಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಸಂತಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ. ಸಿಎಂ, ಸ್ನೇಹಿತರು, ಶಾಸಕರು, ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ. ನನಗೆ ಹಿರಿಯರು ಫೋನ್ ಮಾಡಿ ದಾಖಲೆ ರೆಡಿ ಮಾಡಿಕೊಳ್ಳಲು ಹೇಳಿದರು. ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ. ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯಸಭಾ ಟಿಕೆಟ್ ಗೆ ನಾನು ಪ್ರಯತ್ನ ಮಾಡಿಲ್ಲ ನನ್ನ ಸೇವೆ ಗುರ್ತಿಸಿ ನನಗೆ ಟಿಕೆಟ್ ನೀಡಿದೆ. ಹೀಗಾಘಿ  ರಾಷ್ಟ್ರಮಟ್ಟದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತೇನೆ. ಕಾಯಾ ವಾಚಾ ಮನಸಾ ಕನ್ನಡ ಡಿಂಡಿಮಾ ಬಾರಿಸುವೆ. ಪಕ್ಷ ಸಂಘಟನೆ ನಾಯಕರಿಗೆ ಧನ್ಯವಾದ ಹೇಳುವೆ ಎಂದು ಹಿರಿಯ ನಟ ಜಗ್ಗೇಶ್ ತಿಳಿಸಿದರು.

Key words: Rajya Sabha-ticket- BJP-Actor –Jaggesh-happy