Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಯತೀಂದ್ರ ಸಿದ್ಧರಾಮಯ್ಯ ವಿಡಿಯೋ ವೈರಲ್ ವಿಚಾರ: ಬಿಜೆಪಿ,ಜೆಡಿಎಸ್ ವಿರುದ್ಧ ಕಿಡಿಕಾರಿದ ಡಿಸಿಎಂ ಡಿಕೆ ಶಿವಕುಮಾರ್.

ಯತೀಂದ್ರ ಸಿದ್ಧರಾಮಯ್ಯ ವಿಡಿಯೋ ವೈರಲ್ ವಿಚಾರ: ಬಿಜೆಪಿ,ಜೆಡಿಎಸ್ ವಿರುದ್ಧ ಕಿಡಿಕಾರಿದ ಡಿಸಿಎಂ ಡಿಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,16,2023(www.justkannada.in): ಯತೀಂದ್ರ ಸಿದ್ಧರಾಮಯ್ಯ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶೀವಕುಮಾರ್, ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜನ ಸಂಪರ್ಕ ಸಭೆ ನಡೆಸಿದ್ದಾರೆ. ಸಿಎಸ್​ಆರ್ ಫಂಡ್ ವಿಚಾರವಾಗಿ ಮಾತನಾಡಿದ್ದಾರೆ. ಸ್ಕೂಲ್​ಗಳ ವಿಚಾರವಾಗಿ ಮಹದೇವ್ ಅವರ ಜೊತೆ ಮಾತನಾಡಿದ್ದಾರೆ. ಯತೀಂದ್ರ ಅವರು ಎಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ? ಅವರ ಬಗ್ಗೆ ಮಾತಾಡಿ ಯತೀಂದ್ರ ಅವರನ್ನ ದೊಡ್ಡವರನ್ನಾಗಿ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಬಿಜೆಪಿ ಜೆಡಿಎಸ್ ಅವರಿಗೆ ಕೆಲಸ ಇಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಅನುಭವ, ಅದಕ್ಕೆ ಹಾಗೆ ಟ್ವೀಟ್ ಮಾಡಿದ್ದಾರೆ. ಮಾಡಲಿ ಬಿಡಿ ಎಂದು ಟಾಂಗ್ ನೀಡಿದ ಡಿ.ಕೆ ಶಿವಕುಮಾರ್,  ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ? ವಿಡಿಯೋ ನಾನು ನೋಡಿದ್ದೇನೆ. ಒಬ್ಬ ಮಾಜಿ ಶಾಸಕ ನಾಲ್ಕೈದು ಅಧಿಕಾರಿಗಳ ವರ್ಗಾವಣೆ ಕೇಳಿದರೆ ಏನ್ ತಪ್ಪು? ನನ್ನ ಕ್ಷೇತ್ರದಲ್ಲಿ ನನ್ನ ಸಹೋದರ ಕೆಲವು ಕೆಲಸ ಅಟೆಂಡ್ ಮಾಡುತ್ತಾರೆ. ನಾನು ಬಗುರ್ ಹುಕುಂ ಸಮಿತಿ ಅಧ್ಯಕ್ಷ ಆಗಿದ್ದೇನೆ. ಎಲ್ಲಾ ನೋಡೋದಕ್ಕೆ ಆಗಲ್ಲ ಎಂದು ಹೇಳಿದರು.ಯತೀಂದ್ರ ಸಿದ್ಧರಾಮಯ್ಯ ವಿಡಿಯೋ ವೈರಲ್ ವಿಚಾರ: ಬಿಜೆಪಿ,ಜೆಡಿಎಸ್ ವಿರುದ್ಧ ಕಿ...

ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸುತ್ತಿದ್ದಾರೆ ಎಂಬ  ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ಸಿಎಂ ಸಿದ್ಧರಾಮಯ್ಯಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಯಾರು ದಾರಿ ತಪ್ಪಿಸಲು ಆಗಲ್ಲ ಎಂದರು.

Key words: Yatindra Siddaramaiah -video viral- issue-DCM DK -Shivakumar