ಉಗ್ರ ಯಾಸಿನ್ ಮಲ್ಲಿಕ್ ಗೆ ಜೀವಾವಧಿ ಶಿಕ್ಷೆ ಪ್ರಕಟ.

ನವದೆಹಲಿ,ಮೇ,25,2022(www.justkannada.in) ಉಗ್ರ  ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದ ಮೇಲೆ ಕಾಶ್ಮೀರ ಭಯೋತ್ಪಾದಕ ಯಾಸಿನ್ ಮಲ್ಲಿಕ್ ಗೆ ದೆಹಲಿಯ ಎನ್ ಐಎ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

10 ಲಕ್ಷ ರೂ ದಂಡ, ಉಗ್ರ ಚಟುವಟಿಕೆಗಳಿಗೆ  ಆರ್ಥಿಕ ನೆರವು ನೀಡುತ್ತಿದ್ದ ಆರೋಪದ ಮೇಲೆ ಉಗ್ರ ಯಾಸಿನ್ ಮಲ್ಲಿಕ್ ಬಂಧಿಸಲಾಗಿತ್ತು. ನಂತರ ಕೋರ್ಟ್ ಈತನನ್ನ ಅಪರಾಧಿ ಎಂದು ತೀರ್ಪು ನೀಡಿತ್ತು. ಇದೀಗ ದೆಹಲಿಯ ಎನ್ ಐಎ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ  ಮತ್ತು 10 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.

key words: Yasin Mallik- sentenced – life imprisonment