“ಯಶ್‌ ಟೆಲ್‌”  ಇಂಟರ್‌ ನೆಟ್‌ ಸೇವೆಗೆ ರಾಜವಂಶಸ್ಥ, ಸಂಸದ ಯದುವೀರ್‌ “ಫಿದಾ”..!

We have had an inseparable relationship with Yashtel Cable Network for about ten years. As our palace also uses Yashtel Internet. When I came from America ten years ago, I needed high-speed Internet. That was available only from Yashtel. Since we are also from Mysore, we use Yashtel Internet to motivate ourselves. Another subsidiary of Yashtel, ‘U-Digital’, which is following the same path, is also achieving success. Such good technology needs to continue. I congratulate Manjunath from Mysore who is responsible for all this -Yadhuveer

 

 

ಮೈಸೂರು, ಡಿ.೧೭,೨೦೨೫:  ಸುಧಾರಿತ ಡಿಜಿಟಲ್ ಪ್ರಸಾರ ವ್ಯವಸ್ಥೆಯನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದ ಮೈಸೂರಿನ “ಯೂ ಡಿಜಿಟಲ್” ಸಂಸ್ಥೆ ತನ್ನ ಹೊಸ ಐಪಿ ಟಿವಿ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿತು.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೊಸ ಐಪಿ ಟಿವಿ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.

“ಯು- ಡಿಜಿಟಲ್‌” ನ ಹೊಸ ಐಪಿಟಿವಿ ಹಾಗೂ ಒಟಿಟಿ ಬಿಡುಗಡೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನಮ್ಮ ಹೆಮ್ಮೆಯ ಸಂಗತಿ . ಸುಮಾರು ಹತ್ತು ವರ್ಷದಿಂದ ನಮಗೂ ಯಶಸ್ ಕೇಬಲ್ ನೆಟ್ವರ್ಕ್ಗೂ ಅವಿನಾಭಾವ ಸಂಬಂಧವಿದೆ. ಹೇಗೆಂದರೆ ನಮ್ಮ ಅರಮನೆಯಲ್ಲಿ ಬಳಸುವುದೂ ಕೂಡ ಯಶ್‌ಟೆಲ್ ಇಂಟರ್‌ನೆಟ್. ನಾನು ಹತ್ತು ವರ್ಷಗಳ ಹಿಂದೆ ಅಮೆರಿಕದಿಂದ ಬಂದಾಗ ಹೆಚ್ಚಿನ ಸ್ಪೀಡ್‌ನಲ್ಲಿರುವ ಇಂಟರ್‌ನೆಟ್ ಅವಶ್ಯಕತೆ ಇತ್ತು. ಅದು ದೊರಕಿದ್ದು ಯಶ್‌ಟೆಲ್‌ನಿಂದ ಮಾತ್ರ.

ಯಶ್ಟೆಲ್‌ ಇಂಟರ್‌ ನೆಟ್‌ ಸಂಪರ್ಕ ಪಡೆದ ಆ ದಿನ..

ನಾವು ಕೂಡ ಮೈಸೂರಿನವರೇ ಆಗಿರುವುದರಿಂದ ಪ್ರೇರೇಪಿಸಲು ಯಶ್‌ಟೆಲ್ ಇಂಟರ್‌ನೆಟ್‌ನ್ನು ಬಳಸುತ್ತೇವೆ. ಇದೇ ದಾರಿಯಲ್ಲಿ ಸಾಗುತ್ತಿರುವ ಯಶ್‌ಟೆಲ್‌ನ ಮತ್ತೊಂದು ಅಂಗ ಸಂಸ್ತೆ ‘ಯು-ಡಿಜಿಟಲ್’ ಕೂಡ ಯಶಸ್ಸು ಸಾಧಿಸುತ್ತದೆ. ಇಂತಹ ಒಳ್ಳೆಯ ತಂತ್ರಜ್ಞಾನ ಮುಂದುವರಿಯಬೇಕಿದೆ. ಇದಕ್ಕೆಲ್ಲ ಕಾರಣರಾಗಿರುವ ಮೈಸೂರಿನ ಮಂಜುನಾಥ್‌ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕೇಂದ್ರ ಮಟ್ಟದಲ್ಲಿಯೂ “ ಯು ಡಿಜಿಟಲ್”  ಕ್ರಾಂತಿ ಮಾಡಿದೆ. “ಯು-ಡಿಜಿಟಲ್‌” ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸುವ ಕೆಲಸವಾಗಬೇಕು. ಬರಿ ಮೈಸೂರು, ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ಹೆಸರು ಮಾಡಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ನಮ್ಮ ಮನೆಗಳಲ್ಲಿ ವಿದೇಶಿ ಮೂಲದ ಸೆಟ್‌ ಟಾಪ್‌ ಬಾಕ್ಸ್‌  ಗಳನ್ನ ಬಳಸುತ್ತೇವೆ.  ಆದರೆ ಈಗ ಮೈಸೂರಿನವರದ್ದೇ ನೆಟ್‌ ವರ್ಕ್‌ ಬಾಕ್ಸ್‌ ಬಂದಿದ್ದು ಇದನ್ನು ಬಳಸುವುದು ನಮ್ಮ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ್ರು.

“ ನ್ಯೂಸ್‌ಫಸ್ಟ್ “ ವಾಹಿನಿ  ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಮಾತನಾಡಿ, “ ಯು-ಡಿಜಿಟಲ್ “ ಸಂಸ್ಥೆ ಮುಖ್ಯಸ್ಥ ಕೆ.ಎಂ.ಮಂಜುನಾಥ್ ಹಾಗೂ ಅವರ ತಂಡಕ್ಕೆ ಚಪ್ಪಾಳೆಯ ಮೂಲಕ ಶುಭಾಶಯಗಳನ್ನ ತಿಳಿಸಿದರು.  ಚಪ್ಪಾಳೆಗೆ ಕಾರಣ “ ಯು- ಡಿಜಿಟಲ್”  ತಂಡದ ಸಾಧನೆ ಎಂದರು. ಬೆಂಗಳೂರು, ಡೆಲ್ಲಿ, ಮುಂಬೈನಲ್ಲಿ ಐಪಿಟಿವಿ ಓಟಿಟಿ ಲಾಂಚ್‌ಗಳನ್ನು ನೋಡುತ್ತಿದ್ವಿ, ಆದರೆ ಮೈಸೂರಿನಲ್ಲಿ ಲಾಂಚ್ ಆಗುತ್ತಿರುವುದು ನಿಜವಾಗಿಯೂ ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸಂತಸ ಪಡುವ ವಿಷಯ ಎಂದು ತಿಳಿಸಿದರು. ಕಳೆದ ಐದು ವರ್ಷಗಳಿಂದ ಯು-ಡಿಜಿಟಲ್ ಕಾರ್ಯಕ್ರಮಕ್ಕೆ ಆ ಸಂಸ್ಥೆಯ ಭಾಗವಾಗಿ ಬಂದು ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ. ಆದರೆ ಇವತ್ತಿನ ವಿಶೇಷ ನಾವೆಲ್ಲರೂ ಹೆಮ್ಮೆ ಪಡುವಂಥದ್ದು. ಬದಲಾಗುತ್ತಿರುವ ವಿಚಾರದಲ್ಲಿ ಯು ಡಿಜಿಟಲ್ ತಂಡದ ಬಗ್ಗೆ ವಿಶೇಷವಾದ ಸಂಭ್ರಮ. ಯಾಕೆಂದರೆ ಟೆಕ್ನಾಲಜಿಯನ್ನ ಬೇಗ ಅಳವಡಿಸಿಕೊಳ್ಳುವುದು. ಇದು ನಿಜವಾಗಿಯೂ ನಾವೆಲ್ಲರೂ ಸಂತಸಪಡುವ ವಿಚಾರ ಎಂದರು. ಇನ್ನು ೫ ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಮನಗಳಿಗೆ ತಲುಪಿರುವ ಯೂ ಡಿಜಿಟಲ್ ತಂಡಕ್ಕೆ ಶುಭಾಶಯಗಳನ್ನ ಕೋರಿದರು.

“ ಸುವರ್ಣ ನ್ಯೂಸ್ “ ಕನ್ನಡ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ಯಾರು ಸಮಸ್ಯೆಗಳನ್ನ ಬಗೆಹರಿಸ್ತಾರೋ ಅವರು ಉದ್ಯಮದಲ್ಲಿ ಮುಂದುವರೆಯುತ್ತಾರೆ. ಹಾಗೇ ಯು ಡಿಜಿಟಲ್ ನೂತನ ಆವಿಷ್ಕಾರದ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಕೇಬಲ್ ಉದ್ಯಮದ ಭವಿಷ್ಯವೇ ಆಧುನಿಕ ತಂತ್ರಜ್ಞಾನ ಅಳವಡಿಕೆಯಾಗಿದೆ. ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವವರೇ ಅವರ ಬುಸಿನೆಸ್ ಎತ್ತರಕ್ಕೆ ಬೆಳೆಯುತ್ತದೆ. ಕೇಬಲ್ ಉದ್ಯಮದ ಹಲವು ಸಮಸ್ಯೆಗಳಿಗೆ ಯು ಡಿಜಿಟಲ್ ಒಂದು ಪರಿಹಾರವನ್ನು ತಂದಿದೆ. ಈ ಮೂಲಕ ಯು ಡಿಜಿಟಲ್ ನೆಟ್‌ವರ್ಕ್ ಇನ್ನಷ್ಟು ಸುಧಾರಣೆಯಾಗಲಿ, ಮತ್ತಷ್ಟು ಮನೆಗಳನ್ನು ಯು ಡಿಜಿಟಲ್ ತಲುಪಲಿ ಎಂದರು.

“ ನ್ಯೂಸ್ ೧೮ “ ಕನ್ನಡ ವಾಹಿನಿಯ ಸಂಪಾದಕ ಹರಿಪ್ರಸಾದ್ ಮಾತನಾಡಿ,  ಯು ಡಿಜಿಟಲ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ರು. ವೇಗವಾಗಿ ಓಡ್ತಿರೋ ಕಾಲದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವ ಯು ಡಿಜಿಟಲ್ ನೆಟ್‌ವರ್ಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಗ್ರಾಹಕರ ಜೇಬಿಗೆ ಹೊರೆಯಾಗದಂತೆ ಉತ್ತಮ ಸೇವೆ ನೀಡುತ್ತಿರುವ ಯು ಡಿಜಿಟಲ್ ನೆಟ್‌ವಕ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಮುಂದೆ ತಂತ್ರಜ್ಞಾನ ಅಭಿವೃದ್ದಿಯಾದಂತೆ ಯು ಡಿಜಿಟಲ್ ಸಹ ಮತ್ತಷ್ಟು ಅಡ್ಯಾಪ್ಟ್ ಮಾಡಿಕೊಂಡು ಮತ್ತಷ್ಟು ಸಕ್ಸಸ್ ಕಾಣಲಿ ಎಂದು ಆಶಿಸಿದರು.

key words: Mysore based “Yashtel” internet service, MP Yaduveer “Fida”

SUMMARY:

Mysore based “Yashtel” internet service, MP Yaduveer “Fida”

We have had an inseparable relationship with Yashtel Cable Network for about ten years. As our palace also uses Yashtel Internet. When I came from America ten years ago, I needed high-speed Internet. That was available only from Yashtel. Since we are also from Mysore, we use Yashtel Internet to motivate ourselves. Another subsidiary of Yashtel, ‘U-Digital’, which is following the same path, is also achieving success. Such good technology needs to continue. I congratulate Manjunath from Mysore who is responsible for all this -Yadhuveer