Tuesday, August 18, 2026

BDA Apartments

Home Cinema ಫಾರ್ಮ್ ಹೌಸ್’ ಶಾಪಿಂಗ್ ಗಾಗಿ ಚೀನಾಗೆ ಹೊರಟ ಯಶ್ !

ಫಾರ್ಮ್ ಹೌಸ್’ ಶಾಪಿಂಗ್ ಗಾಗಿ ಚೀನಾಗೆ ಹೊರಟ ಯಶ್ !

ಬೆಂಗಳೂರು, ಡಿಸೆಂಬರ್ 17, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್-2 ಶೂಟಿಂಗ್ ಬ್ಯುಸಿ ನಡುವೆ ಚೀನಾ ಪ್ರವಾಸ ಕೈಗೊಂಡಿದ್ದಾರೆ.

ಐರಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದ ಯಶ್ ನಂತರ ಕೆ.ಜಿ.ಎಫ್ ಶೂಟಿಂಗ್ನತ್ತ ಯಶ್ ತೆರಳಿದ್ದರು. ಇದೀಗ  ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದಾರೆ.

ಫಾರ್ಮ್ ಹೌಸ್ ಗೆ ಬೇಕಾದ ವಸ್ತುಗಳನ್ನು ತರಲು ಚೀನಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಿ.21 ರಂದು ವಾಪಾಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ದಿನ ಕೆ.ಜಿ.ಎಫ್-2 ಫಸ್ಟ್ ಲುಕ್ ರಿಲೀಸ್ ಆಗಲಿದೆ.