#Instagram ದಾಖಲೆ ಬರೆದ ರಾಕ್ಹಿಂಗ್ ಸ್ಟಾರ್

ಬೆಂಗಳೂರು, ಆಗಸ್ಟ್ 01, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಹೌದು. ಕನ್ನಡದ ಇತರ ನಟರಾದ ದರ್ಶನ್, ಸುದೀಪ್, ಪುನೀತ್ ಅವರನ್ನು ಯಶ್ ಇನ್ ಸ್ಟಾಗ್ರಾಂ ನಲ್ಲಿ ಹಿಂದೆ ಹಾಕಿದ್ದಾರೆ.

ನಟ ಯಶ್ ಈಗ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಒಂದು ಮಿಲಿಯನ್ ಗಡಿ ದಾಟುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿಯೂ ದಾಖಲೆ ಮಾಡಿದ್ದಾರೆ.

‘ಕೆಜಿಎಫ್’ ಸಿನಿಮಾದ ಸಮಯದಲ್ಲಿ ಇನ್ಸ್ಟಾಗ್ರಾಮ್ ಗೆ ಬಂದಿದ್ದ ಯಶ್ ಈಗ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ನಟ ದರ್ಶನ್ 261K, ಸುದೀಪ್ 447K ಹಾಗೂ ಪುನೀತ್ ರಾಜ್ ಕುಮಾರ್ 717K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.