ಅಮ್ಮನಿಗೆ ಕನ್ನಡದಲ್ಲಿ ಜನ್ಮ ದಿನದ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ

ಬೆಂಗಳೂರು, ಆಗಸ್ಟ್ 01, 2019 (www.justkannada.in): ನಟಿ ಅನುಷ್ಕಾ ಶೆಟ್ಟಿ ಮಾತೃಭಾಷೆ ಕನ್ನಡದಲ್ಲೇ ತಮ್ಮ ತಾಯಿಗೆ ಜನ್ಮದಿನದ ಶುಭಾಶಯ ತಿಳಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಹೌದು, ಬಹುಭಾಷ ನಟಿ, ಕನ್ನಡತಿ ಅನುಷ್ಕಾ ಶರ್ಮಾ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ಅಮ್ಮ ಸೇರಿದಂತೆ ಕುಟುಂಬಸ್ಥರು ಇರುವ ಫೋಟೋ ಹಾಕಿ `ಜನ್ಮ ದಿನದ ಶುಭಾಶಯಗಳು ಅಮ್ಮಾ’ ಎಂದು ಮಾತೃಭಾಷೆಯಲ್ಲೇ ಶುಭಾಶಯ ಕೋರಿದ್ದಾರೆ.

ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಹೆಸರು ಗಳಿಸಿ ಪರಭಾಷೆಗೆ ಹಾರಿದ ನಂತರ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡುವ ಅನೇಕರಿಗೆ ಇದು ಚಾಟಿ ಬೀಸಿದಂತಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.