ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಕೊರೋನಾಗೆ ಬಲಿ…

ಉಡುಪಿ,ನವೆಂಬರ್,7,2020(www.justkannada.in):  ಕೊರೋನಾ ವೈರಸ್ ಗೆ ತುತ್ತಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ(71) ಅವರು ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

jk-logo-justkannada-logo

 ಹದಿನೈದು ದಿನದ ಹಿಂದೆ ಮಲ್ಪೆ ವಾಸುದೇವ ಸಾಮಗ ಅವರಿಗೆ   ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಾಸುದೇವ ಸಾಮಗ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.yakshagana-artist-malpe-vasudeva-samaga-death-corona-udupi

ತೆಂಕು ಬಡಗು ತಿಟ್ಟು ಅಪ್ರತಿಮ ಕಲಾವಿದ ಚತುರ ಮಾತುಗಾರ ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಮೊಟ್ಟಮೊದಲು ಸಂಚಾರ ಆರಂಭಿಸಿದ ತಾಳಮದ್ದಳೆ ಅರ್ಥದಾರಿ ಮಲ್ಪೆ ವಾಸುದೇವ ಸಾಮಗ  ಕೋಟೇಶ್ವರ ನಿವಾಸಿಯಾಗಿದ್ದು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನ ಮನ ಸೆಳೆದಿದ್ದರು.

Key words: Yakshagana artist- Malpe Vasudeva samaga- death- Corona-udupi